ಅಹ್ಮದಾಬಾದ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೇಶದಲ್ಲಿ ಬುಧವಾರ ಅತ್ಯಂತ ಉತ್ಸಾಹ, ಸಂಭ್ರಮದಿಂದ ಆಚರಿಸಲಾಗಿದೆ. ದೇಶದುದ್ದಗಲಕ್ಕೂ ಅಪಾರ ಸಂಖ್ಯೆಯಲ್ಲಿ ಯೋಗ ಕಾರ್ಯಕ್ರಮಗಳು ನೆರವೇರಿದವು. ಆದರೆ ವಿಶೇಷವೆಂಬಂತೆ ಗುಜರಾತ್ನಲ್ಲಿ ಯೋಗ ದಿನಾಚರಣೆಯಂದು 23 ವಿಶ್ವ ದಾಖಲೆಗಳು ನಿರ್ಮಾಣವಾಗಿದೆ. ಮಾತ್ರವಲ್ಲ ಇನ್ನಷ್ಟು ವಿಶ್ವ ದಾಖಲೆಗಳು ಆಗುವ ನಿರೀಕ್ಷೆ ಇದೆ.
ಅಹ್ಮದಾಬಾದ್ನಲ್ಲಿ ಗುಜರಾತ್ ಸರ್ಕಾರ ಮತ್ತು ಪತಾಂಜಲಿ ಪೀಠ ಆಯೋಜಿಸಿದ್ದ ಯೋಗ ಸಮಾರಂಭ ಎರಡು ವಿಶ್ವ ದಾಖಲೆ ನಿರ್ಮಿಸಿದೆ. ಒಂದು ಜಾಗದಲ್ಲಿ ಅತೀ ಹೆಚ್ಚಿನ ಜನ ಯೋಗ ಪಾಠ ಪಡೆಯುತ್ತಿರುವ ದಾಖಲೆ ಮಾಡಿದೆ. 3 ಲಕ್ಷ ಜನ ಇದರಲ್ಲಿ ಭಾಗಿಯಾಗಿದ್ದರು. ವಿಭಿನ್ನ ಜಾಗದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಯೋಗ ಮಾಡುತ್ತಿರುವ ದಾಖಲೆಯೂ ನಿರ್ಮಾಣವಾಗಿದೆ.
ಇನ್ನೂ ವಿವಿಧ ಕಡೆಗಳಲ್ಲಿ ನಡೆದ ಯೋಗ ಸಮಾರಂಭಗಳು ಬೇರೆ ಬೇರೆ ರೀತಿಯಲ್ಲಿ ವಿಶ್ವ ದಾಖಲೆಗಳನ್ನು ನಿರ್ಮಿಸಿವೆ. ಕೆಲವೊಂದು ದಾಖಲೆಗಳ ಬಗ್ಗೆ ಪ್ರಮಾಣಪತ್ರ ಸಿಕ್ಕಿದ್ದು, ಇನ್ನು ಕೆಲವು ಇನ್ನಷ್ಟೇ ಖಚಿತಗೊಳ್ಳಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.