ಸೂರತ್: ಯುರೋಪ್ನ ಅತೀ ಎತ್ತರದ ಪರ್ವತ, 18,510 ಅಡಿ ಎತ್ತರವಿರುವ ಮೌಂಟ್ ಎಲ್ಬ್ರಸ್ನ್ನು ಸೂರತ್ ಮೂಲದ 9 ವರ್ಷದ ಬಾಲಕಿ ಹತ್ತಿ ಮಹತ್ವದ ಸಾಧನೆ ಮಾಡಿದ್ದಾಳೆ. ಈ ಮೂಲಕ ಈ ಶಿಖರವನ್ನು ಹತ್ತಿದ ಅತೀ ಕಿರಿಯ ಬಾಲಕಿ ಎಂಬ ದಾಖಲೆ ನಿರ್ಮಿಸಿದ್ದಾಳೆ.
ಸೂರತ್ನ ಸಾರಿಕ ಮೆಹ್ತಾ, ಅವರ ಪತಿ ಜಿಗ್ನೇಶ್, ಮಗ 13 ವರ್ಷದ ಜನಮ್, ಮಗಳು 9 ವರ್ಷದ ಧನ್ಶ್ರೀ ಒಟ್ಟಾಗಿ ಮೌಂಟ್ ಎಲ್ಬ್ರಸ್ನ್ನು ಹತ್ತಿದ್ದು, ಅದರಲ್ಲಿ ಧನ್ಶ್ರೀ ಈ ಶಿಖರ ಹತ್ತಿದ ಅತೀ ಕಿರಿಯಳು ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ಜೂನ್ 13ರಂದು ಇವರು ಮೌಂಟ್ ಎಲ್ಬ್ರಸ್ ಹತ್ತಲು ಆರಂಭಿಸಿದ್ದರು. ಕಠಿಣ ಸವಾಲುಗಳನ್ನು ಎದುರಿಸಿ ಈ ಕುಟುಂಬ ಈ ಸಾಧನೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.