ನವದೆಹಲಿ: ಭಾರತದಲ್ಲಿ ಹಸಿವು ಮತ್ತು ಅಪೌಷ್ಠಿಕತೆಯನ್ನು ತೊಡೆದು ಹಾಕಲು ನಿರಂತರ ಶ್ರಮಪಡುತ್ತಿರುವ ಹಸಿವು ವಿರೋಧಿ ಹೋರಾಟಗಾರ ಅಂಕಿತ್ ಕವತ್ರ ಅವರು ಪ್ರತಿಷ್ಠಿತ ‘ಕ್ವೀನ್ಸ್ ಯಂಗ್ ಲೀಡರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
53 ಕಾಮನ್ವೆಲ್ತ್ ರಾಷ್ಟ್ರಗಳ 60ಮಂದಿ ಈ ಪ್ರಶಸ್ತಿಗೆ ಆಯ್ಕೆಗೊಂಡಿದ್ದು, ಅವರಲ್ಲಿ ಭಾರತದ ಅಂಕಿತ್ ಕೂಡ ಒಬ್ಬರು.
25 ವರ್ಷದ ಅಂಕಿತ್ ಅವರನ್ನು ಜೂನ್ 29ರಂದು ಬಕಿಂಗ್ಹ್ಯಾಮ್ ಪ್ಯಾಲೇಸ್ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಣಿ ಎರಡನೇ ಎಲಿಜಬೆತ್ ಅವರು ಅವಾರ್ಡ್ ನೀಡಿ ಪುರಸ್ಕರಿಸಲಿದ್ದಾರೆ.
2014ರಲ್ಲಿ ಅಂಕಿತ್ ಅವರು ತಮ್ಮ ಕಾರ್ಪೋರೇಟ್ ಬ್ಯುಸಿನೆಸ್ ಜಾಬ್ನ್ನು ತೊರೆದು ಭಾರತದಲ್ಲಿನ ಹಸಿವು, ಅಪೌಷ್ಠಿಕತೆ, ಆಹಾರ ವ್ಯರ್ಥಗೊಳಿಸುವಿಕೆಯನ್ನು ತಡೆಯಲು ಎನ್ಜಿಓವೊಂದನ್ನು ಸ್ಥಾಪಿಸಿದರು. ಇದರ ಮುಖೇನ ಹೋಟೆಲ್, ಕ್ಯಾಂಟೀನ್, ರೆಸ್ಟೋರೆಂಟ್ಗಳಲ್ಲಿ ಮಿಕ್ಕುಳಿದ ಆಹಾರಗಳನ್ನು ಸಂಗ್ರಹಿಸಿ ಅವುಗಳನ್ನು ಹಸಿವಿನಿಂದ ಇರುವವರಿಗೆ ಹಂಚುವ ಕಾರ್ಯ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.