ಮುಂಬಯಿ: 2032ರ ಒಲಿಂಪಿಕ್ಸ್ನ್ನು ಮತ್ತು 2030ರ ಏಷ್ಯನ್ ಗೇಮ್ಸ್ನ್ನು ಭಾರತದಲ್ಲಿ ಆಯೋಜನೆಗೊಳಿಸುವುದಕ್ಕೆ ಬಿಡ್ ಮಾಡಲು ಅನುಮತಿ ನೀಡುವಂತೆ ಭಾರತೀಯ ಒಲಿಂಪಿಕ್ ಅಸೋಸಿಯೇಶನ್(IOA) ಸರ್ಕಾರವನ್ನು ಕೋರಿದೆ.
‘2020ರ ಏಷ್ಯನ್ ಬೀಚ್ ಗೇಮ್ಸ್, ಅದೇ ವರ್ಷದ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾಸ್ ಜನರಲ್ ಅಸೆಂಬ್ಲಿ, 2021ರ ಇಂಟರ್ನ್ಯಾಷನಲ್ ಒಲಿಂಪಿಕ್ ಕಮಿಟಿ ಸೆಷನ್ನನ್ನು ಆಯೋಜನೆಗೊಳಿಸಲು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಬಯಸಿದೆ’ ಎಂದು ಅದರ ಅಧ್ಯಕ್ಷ ಎನ್.ರಾಮಚಂದ್ರನ್ ತಿಳಿಸಿದ್ದಾರೆ.
ಜಗತ್ತಿನ ಎರಡನೇ ಅತೀದೊಡ್ಡ ಜನಸಂಖ್ಯೆಯುಳ್ಳ ದೇಶ ಭಾರತಕ್ಕೆ ಒಲಿಂಪಿಕ್ ಗೇಮ್ಸ್ ಮೂಲಕ ತನ್ನ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಲು ಸಮಯ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಒಲಿಂಪಿಕ್ಸ್ 8 ವರ್ಷಗಳ ಪ್ರಕ್ರಿಯೆ. ಅದಕ್ಕೆ ಈಗಿನಿಂದಲೇ ನಾವು ಸಿದ್ಧರಾಗಬೇಕು. ಬಿಡ್ ಮಾಡಿದರೆ ಅದನ್ನು ಪಡೆದುಕೊಳ್ಳುವಂತೆ ಮಾಡುವ ಜವಾಬ್ದಾರಿ ನಮ್ಮದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.