ನವದೆಹಲಿ: ಮುಂದಿನ ಐದು ವರ್ಷದಲ್ಲಿ ಎಲ್ಲಾ ಸರ್ಕಾರಿ ಮತ್ತು ವಾಣಿಜ್ಯ ಕಟ್ಟಡಗಳನ್ನು ಇಂಧನ ದಕ್ಷ ಕಟ್ಟಡಗಳನ್ನಾಗಿ ಮಾಡಿ ಆ ಮೂಲಕ ವಾರ್ಷಿಕ 35 ಸಾವಿರ ಕೋಟಿ ರೂಪಾಯಿಗಳನ್ನು ಉಳಿತಾಯಗೊಳಿಸುವ ಮಹತ್ವದ ಗುರಿಯನ್ನು ಕೇಂದ್ರ ಹೊಂದಿದೆ.
ಎನರ್ಜಿ ಕನ್ಸರ್ವೇಶನ್ ಬಿಲ್ಡಿಂಗ್ ಕೋಡ್-2017 ಮೂಲಕ ಈ ಗುರಿಯನ್ನು ಸಾಧಿಸಲು ಸರ್ಕಾರ ನಿರ್ಧರಿಸಿದ್ದು, ಉಳಿತಾಯವಾದ ವಿದ್ಯುತ್ನ್ನು ಬಡವರ ಮನೆ ಮತ್ತು ನೀರಾವರಿ ಪಂಪ್ಗಳಿಗೆ ಬಳಕೆ ಮಾಡುವ ಮಹತ್ತರವಾದ ಆಶಯವನ್ನು ಹೊಂದಿದೆ.
ಕಟ್ಟಡಗಳನ್ನು ಇಂಧನ ದಕ್ಷ ಲೈಟ್ಸ್, ಅಪ್ಲಿಯನ್ಸ್ ಮತ್ತು ಇತರ ಕಾರ್ಯಕ್ರಮಗಳ ಮೂಲಕ ರೆಟ್ರೋಫಿಟ್ಟಿಂಗ್ ಮಾಡುವುದರಿಂದ ಲೈಟಿಂಗ್ ಮತ್ತು ಏರ್ ಕಂಡಿಷನ್ಗಳ ವಿದ್ಯುತ್ ವ್ಯಯವನ್ನು ತಗ್ಗಿಸಿ ವಾರ್ಷಿಕ 30-40 ಬಿಲಿಯನ್ ಯುನಿಟ್ ವಿದ್ಯುತ್ ಉಳಿಸಬಹುದಾಗಿದೆ.
ಕಟ್ಟಡಗಳನ್ನು ಎನರ್ಜಿ ಕೋಡ್ಗಳ ಆಧಾರದಲ್ಲಿ ವಿನ್ಯಾಸಗೊಳಿಸುವುದರಿಂದ 2030ರ ವೇಳೆಗೆ 300 ಬಿಲಿಯನ್ ಯುನಿಟ್ ವಿದ್ಯುತ್ ವ್ಯಯವನ್ನು ತಗ್ಗಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.