ಬೆಂಗಳೂರು: ಟಾವೊ ಪೊರ್ಚೊನ್ ಲಿಂಚ್ ವಿಶ್ವದ ಅತೀ ಹಿರಿಯ ಯೋಗ ಶಿಕ್ಷಕಿ, ಅಮ್ಮ ನನ್ನಮಲ್ ಭಾರತದ ಅತೀ ಹಿರಿಯ ಯೋಗ ಗುರು. ಈ ಇಬ್ಬರು ಒಂದುಗೂಡಿ ಬೆಂಗಳೂರಿನಲ್ಲಿ ಬುಧವಾರ ಯೋಗ ಪ್ರದರ್ಶಿಸಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಕಂಠೀರವ ಹೊರಾಂಗಣ ಕ್ರಿಡಾಂಗಣದಲ್ಲಿ ನಡೆದ ಯೋಗ ಸಮಾರಂಭದಲ್ಲಿ ಈ ಇಬ್ಬರು ಹಿರಿಯಜ್ಜಿಯರು ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಅವರ ಯೋಗ ನೈಪುಣ್ಯತೆ ಕಂಡು ಉಳಿದವರು ನಿಬ್ಬೆರಗಾದರು.
ಟಾವೋ ಅವರು 2012ರಲ್ಲಿ ತಮ್ಮ 93ನೇ ವಯಸ್ಸಿನಲ್ಲಿ ವಿಶ್ವದ ಅತೀ ಹಿರಿಯ ಯೋಗ ಶಿಕ್ಷಕಿ ಎಂಬ ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದಾರೆ. ಈಗಲೂ ಅವರು ನ್ಯೂಯಾರ್ಕ್ನಲ್ಲಿ ಯೋಗ ಹೇಳಿಕೊಡುತ್ತಿದ್ದಾರೆ. ಇವರ ತಂದೆ ಫ್ರೆಂಚ್ ಆಗಿದ್ದು, ತಾಯಿ ಭಾರತದ ಮಣಿಪುರ ಮೂಲದವರಾಗಿದ್ದಾರೆ.
ಅಮ್ಮ ನನ್ನಮಲ್ ಅವರೂ 93 ವರ್ಷದವರಾಗಿದ್ದು ಭಾರತದ ಅತೀ ಹಿರಿಯ ಯೋಗ ಗುರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.