ವಾರಣಾಸಿ: ಕಡಿಮೆ ಕಟ್ಟಿಗೆಗಳನ್ನು ಬಳಸಿ ಈ ಮೂಲಕ ಗಂಗಾ ಮತ್ತು ಸುತ್ತಲ ನದಿಗಳನ್ನು ಮಲಿನಗೊಳ್ಳುವುದರಿಂದ ತಪ್ಪಿಸುವ ಸಲುವಾಗಿ ’ಹಸಿರು ಸಶ್ಮಾನ’ಗಳನ್ನು ರಿಷಿಕೇಶ, ಹರಿದ್ವಾರ, ಉತ್ತರಕಾಶಿ, ಗಂಗೋತ್ರಿಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ನಮಾಮಿ ಗಂಗೆ ಯೋಜನೆಯಡಿ ಗಂಗಾ ಗ್ರಾಮಗಳು ಎಂದು ಕರೆಯಲ್ಪಡುವ ಈ ಸ್ಥಳಗಳಲ್ಲಿ ಅಂತ್ಯಸಂಸ್ಕಾರವನ್ನು ಪ್ರಕೃತಿಗೆ ಹಾನಿಯಾಗದ ರೀತಿಯಲ್ಲಿ ನಡೆಸುವ ಪರಿಸರ ಸ್ನೇಹಿ ಸ್ಮಶಾನಗಳನ್ನು ನಿರ್ಮಿಸುವ ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಾಗುತ್ತಿದೆ.
ಸಾಮಾನ್ಯ ಅಂತ್ಯಸಂಸ್ಕಾರಕ್ಕೆ 600 ಕೆಜಿ ಕಟ್ಟಿಗೆಗಲ ಅಗತ್ಯವಿದೆ, ಆದರೆ ಪರಿಸರ ಸ್ನೇಹಿ ಸ್ಮಶಾನಗಳಲ್ಲಿ ಇದರ ಪ್ರಮಾಣ 100ಕೆಜಿಗೆ ತಗ್ಗಲಿದೆ. ಇದರಿಂದ ಸಾಕಷ್ಟು ಇಂಗಾಲದ ಹೊರಸೂಸುವಿಕೆ ತಗ್ಗಿದಂತಾಗುತ್ತದೆ.
ಈ ಸ್ಮಶಾನ ಹೆಣವನ್ನು ಸುಡಲು ಪೈರ್ ಓವನ್ ಸೃಷ್ಟಿಸಿ ಸಾಕಷ್ಟು ಉಷ್ಣತೆಯನ್ನು ಉತ್ಪಾದಿಸುತ್ತದೆ. ಹೀಗಾಗಿ ಕಡಿಮೆ ಕಟ್ಟಿಗೆಯಿದ್ದರೂ ಹೆಣ ಬೇಗ ಸುಟ್ಟು ಹೋಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.