ಬೆಂಗಳೂರಿನ ಟ್ರಿನಿಟಿ ಸರ್ಕಲ್ನಲ್ಲಿ ನಿಯೋಜಿತರಾಗಿದ್ದ ಟ್ರಾಫಿಕ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂ.ಎಲ್ ನಿಜಲಿಂಗಪ್ಪ ಅವರು ಮಾಡಿದ ಕಾರ್ಯ ಇಂದು ಎಲ್ಲರ ಪ್ರಶಸಂಸೆಗೂ ಕಾರಣವಾಗಿದೆ. ಅವರ ಕ್ಷಿಪ್ರ ಚಿಂತನೆ ಮತ್ತು ಕ್ಷಿಪ್ರ ಕಾರ್ಯ ಇಂದು ಒಂದು ಅಮೂಲ್ಯ ಜೀವವನ್ನು ಉಳಿಸಿದೆ.
ದೇಶದ ಘನತೆವೆತ್ತ ರಾಷ್ಟ್ರಪತಿ ಅವರ ಕಾರನ್ನೇ ನಿಲ್ಲಿಸಿ ಅಂಬ್ಯುಲೆನ್ಸ್ವೊಂದಕ್ಕೆ ಹೋಗಲು ದಾರಿ ಮಾಡಿಕೊಟ್ಟ ಅವರ ಕಾರ್ಯ ಅವರ ಇಲಾಖೆಯ ಇತರ ಸಿಬ್ಬಂದಿಗಳಿಗೂ ಪ್ರೇರಣೆ. ಬಹುಶಃ ಅವರು ಮಾಡಿದ ಈ ಸಾಹಸವನ್ನು ಅವರ ಸಹೋದ್ಯೋಗಿಗಳು ಮಾಡಲು ಹಿಂದೇಟು ಹಾಕುತ್ತಿದ್ದರೇನೋ.
ಶನಿವಾರ ನಮ್ಮ ಮೆಟ್ರೋ ಗ್ರೀನ್ ಲೈನ್ನನ್ನು ಉದ್ಘಾಟಿಸಲು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ನಿಜಲಿಂಗಪ್ಪನವರನ್ನು ವಿವಿಐಪಿ ಕನ್ವೆ ಮೂವ್ಮೆಂಟ್ ವೀಕ್ಷಣೆಗೆ ನಿಯೋಜಿತರಾಗಿದ್ದರು.
ಪ್ರಣವ್ ಕಾರು ರಾಜಭವನದಿಂದ ಹೊರ ಬರುತ್ತಿದ್ದ ವೇಳೆ ಅಂಬ್ಯುಲೆನ್ಸ್ವೊಂದು ಮುಂದಕ್ಕೆ ಚಲಿಸಲು ಪರದಾಡುತ್ತಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ನಿಜಲಿಂಗಪ್ಪ ರಾಷ್ಟ್ರಪತಿಗಳ ಕಾರನ್ನು ತಡೆದು ನಿಲ್ಲಿಸಿ ಅಂಬ್ಯುಲೆನ್ಸ್ಗೆ ಜಾಗ ಮಾಡಿಕೊಟ್ಟರು.
ಇವರ ಈ ಕಾರ್ಯವನ್ನು ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ಟ್ರಾಫಿಕ್ ಈಸ್ಟ್ ಡಿವಿಜನ್ ಬೆಂಗಳೂರು ಸಿಟಿ ಅಭಯ್ ಗೋಯಲ್ ಟ್ವಿಟರ್ ಮೂಲಕ ಶ್ಲಾಘಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.