ಬೆಂಗಳೂರು : ಕೇರಳದ ಚಿಮೇನಿ ತೆರೆದ ಕಾರಾಗೃಹದ ಗೋಶಾಲೆಗೆ ದೇಶೀ ತಳಿಯ 18 ಗೋವುಗಳನ್ನು ಪೂರೈಸುವಂತೆ ಕಾರಾಗೃಹದ ಸೂಪರಿಂಟೆಂಡೆಂಟ್ ಶ್ರೀರಾಮಚಂದ್ರಾಪುರಮಠದ ಕಾಮದುಘಾ ಯೋಜನೆಗೆ ಕೋರಿಕೆಯನ್ನು ಸಲ್ಲಿಸಿದ್ದಾರೆ.
ಜೈಲಿನ ಗೋಶಾಲೆಗೆ ಒಟ್ಟು 20 ದೇಶೀ ಗೋವುಗಳನ್ನು ಪೂರೈಸುವಂತೆ ಮಾಡಲಾಗಿದ್ದ ಕೋರಿಕೆಯ ಮೇರೆಗೆ, ಕಳೆದ ಜನವರಿಯಲ್ಲಿ ಪ್ರಥಮಹಂತವಾಗಿ 2 ಗೋವುಗಳನ್ನು ನೀಡಲಾಗಿತ್ತು, ಸ್ವತಃ ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಚಿಮೇನಿ ಕಾರಾಗೃಹಕ್ಕೆ ಚಿತ್ತೈಸಿ ಗೋವುಗಳನ್ನು ಹಸ್ತಾಂತರಿಸಿದ್ದರು. ಜೈಲಿನ ಆವರಣದಲ್ಲಿ ಪೂಜೆಯನ್ನು ಮಾಡಲಾಗಿದೆ ಎಂಬ ಅಪಪ್ರಚಾರದಿಂದಾಗಿ; ಜೈಲಿಗೆ ಗೋವಿನ ಹಸ್ತಾಂತರದ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೀಗ ಕೇರಳ ರಾಜ್ಯದ ಕಾರಾಗೃಹಗಳ ಮಹಾನಿರ್ದೇಶಕರೇ 18 ದೇಶೀ ಗೋವುಗಳನ್ನು ಶ್ರೀರಾಮಚಂದ್ರಾಪುರಮಠದ ಕಾಮದುಘಾ ಯೋಜನೆಯಿಂದ ದೇಣಿಗೆಯಾಗಿ ಪಡೆದುಕೊಳ್ಳಲು ಚಿಮೇನಿ ತೆರೆದ ಕಾರಾಗೃಹದ ಸೂಪರಿಂಟೆಂಡೆಂಟ್ ಅವರಿಗೆ ಪತ್ರದ(P2/11485/2017 PrHQ 09-06-2017) ಮೂಲಕ ಸಮ್ಮತಿ ಸೂಚಿಸಿದ್ದಾರೆ.
ಕಾರಾಗೃಹಗಳ ಮಹಾನಿರ್ದೇಶಕರೇ ಗೋವುಗಳನ್ನು ಪಡೆದುಕೊಳ್ಳಲು ಸಮ್ಮತಿ ನೀಡಿರುವುದು, ಕೇರಳದ ಸರ್ಕಾರವೇ ಸಮ್ಮತಿ ಸೂಚಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ಚಿಮೇನಿ ಕಾರಾಗೃಹದ ಸೂಪರಿಂಟೆಂಡೆಂಟ್ ಅವರು ಶ್ರೀರಾಮಚಂದ್ರಾಪುರಮಠದ ಕಾಮದುಘಾ ಯೋಜನೆಯಿಂದ ದೇಶಿ ಗೋವುಗಳನ್ನು ಗೋಸಂರಕ್ಷಣೆಯ ಉದ್ದೇಶಕ್ಕಾಗಿ ಜೈಲಿನಲ್ಲಿರುವ ಗೋಶಾಲೆಗೆ ಪೂರೈಸುವಂತೆ ಕೋರಿಕೆ ಸಲ್ಲಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.