ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲಿರುವ ಸಂಸದರು ಮತ್ತು ಶಾಸಕರು ಬೇರೆ ಬೇರೆ ಬಣ್ಣಗಳ ಬ್ಯಾಲೆಟ್ ಪೇಪರ್ನ್ನು ಹೊಂದಲಿದ್ದಾರೆ.
ಸಂಸತ್ತು ಸದಸ್ಯರಿಗೆ ಹಸಿರು ಬಣ್ಣದ ಬ್ಯಾಲೆಟ್ ಪೇಪರ್ ನೀಡಲಾಗುತ್ತಿದ್ದು, ಶಾಸಕರುಗಳಿಗೆ ಗುಲಾಬಿ ಬಣ್ಣದ ಬ್ಯಾಲೆಟ್ ಪೇಪರ್ಗಳನ್ನು ನೀಡಲಾಗುತ್ತಿದೆ.
ಜುಲೈ 17ರಂದು ಚುನಾವಣೆ ನಡೆಯಲಿದೆ. ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜುಲೈ1 ರವರೆಗೆ ಅವರ ನಾಮಪತ್ರವನ್ನು ಹಿಂಪಡೆಯದೇ ಇದ್ದರೆ ಬಳಿಕ ಚುನಾವಣಾ ಆಯೋಗ ಬ್ಯಾಲೆಟ್ ಪೇಪರ್ಗಳ ಪ್ರಿಂಟಿಂಗ್ ಕಾರ್ಯಗಳನ್ನು ಆರಂಭ ಮಾಡಲಿದೆ.
ಶಾಸಕನ ಮತದ ಮೌಲ್ಯ ಆತ ಪ್ರತಿನಿಧಿಸುವ ರಾಜ್ಯದ ಜನಸಂಖ್ಯೆಯ ಆಧಾರದ ಮೇಲೆ ಇರುತ್ತದೆ, ಆದರೆ ಸಂಸದ ಮತದ ಮೌಲ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ, ಅದು 708ಆಗಿರುತ್ತದೆ.
ಹೀಗಾಗೀ ಬೇರೆ ಬೇರೆ ಬಣ್ಣದ ಬ್ಯಾಲೆಟ್ ಪೇಪರ್ಗಳಿಗೆ ಮೌದ್ಯದ ಆಧಾರಿತ ವೋಟುಗಳನ್ನು ಲೆಕ್ಕಹಾಕಲು ಅಧಿಕಾರಿಗಳಿಗೆ ಸಹಾಯವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.