ನವದೆಹಲಿ : ವಿಹೆಚ್ಪಿ ಮುಖಂಡ ಅಶೋಕ್ ಸಿಂಘಾಲ್ ಅವರ ಚಿತಾಭಸ್ಮವನ್ನು ವಿಸರ್ಜನೆ ಮಾಡಿದ ಸ್ಥಳವನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಮುಂದಾಗಿದೆ.
ಅಶೋಕ್ ಸಿಂಘಾಲ್ ಅವರ ಮರಣದ ಬಳಿಕ ಅವರ ಚಿತಾಭಸ್ಮವನ್ನು ಹಿಮಾಚಲ ಪ್ರದೇಶದ ಮಠದಲ್ಲಿ 6 ತಿಂಗಳವರೆಗೆ ಸಂರಕ್ಷಿಸಿಡಲಾಗಿತ್ತು. ಬಳಿಕ ಕಳೆದ ವರ್ಷದ ಜೂನ್ನಲ್ಲಿ ಈ ಚಿತಾಭಸ್ಮವನ್ನು ಹಿಮಾಚಲ ಪ್ರದೇಶದ ಲಾಹೂಲ್ ಪ್ರದೇಶದ ಚಂದ್ರ ಮತ್ತು ಭಾಗ ನದಿಗಳ ಸಂಗಮ ತಾಣವಾದ ತಂಡೀ ಸಂಗಮ್ನಲ್ಲಿ ವಿಸರ್ಜನೆಗೊಳಿಸಲಾಯಿತು.
ಇದೀಗ ಪ್ರವಾಸೋದ್ಯಮ ಸಚಿವಾಲಯವು ತಂಡೀ ಸಂಗಮವನ್ನು ಚಂದ್ರಭಾಗ ಅಭಿವೃದ್ಧಿ ಮಂಡಳಿ ಮೂಲಕ ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಮುಂದಾಗಿದೆ.
13 ಹಿಮಾಲಯನ್ ಸರ್ಕ್ಯೂಟ್ಗಳಲ್ಲಿ ಇದು ಕೂಡಾ ಒಂದು ಸಕ್ಯೂಟ್ ಆಗಿ ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಯಾಗಲಿದೆ.
ತಂಡೀ ಸಂಗಮವು ಸಿಂಘಾಲ್ ಅವರ ಅಸ್ಥಿಯನ್ನು ವಿಸರ್ಜನೆ ಮಾಡಿದ ಕ್ಷೇತ್ರವಾದ್ದರಿಂದ ಇದು ವಿಶೇಷ ಮಹತ್ವದ ಸ್ಥಳವಾಗಿದೆ ಎಂದು ಅಲ್ಲಿಗೆ ಭೇಟಿ ಕೊಟ್ಟ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ.
ಚಂದ್ರ ಭಾಗ್ ನದಿಯನ್ನು ಗಂಗಾ ನದಿಯ ಬಳಿಕದ ಅತಿ ಪವಿತ್ರ ನದಿಯೆಂದು ಪರಿಗಣಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.