ಗಾಂಧಿನಗರ : ಮಹಾತ್ಮಾ ಗಾಂಧೀಜಿಯವರ ಸಬರ್ಮತಿ ಆಶ್ರಮ 100 ವರ್ಷಗಳನ್ನು ಪೂರೈಸುತ್ತಿರುವ ಹಿನ್ನಲೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಶನಿವಾರ ‘ಗಾಂಧೀ ದರ್ಶನ್ ಆಸ್ಥಾ’ ವಿಶೇಷ ರೈಲಿಗೆ ಚಾಲನೆಯನ್ನು ನೀಡಿದರು.
ರಾಷ್ಟ್ರಪಿತ ಗಾಂಧೀಜಿಯವರು ಸಬರ್ಮತಿ ಆಶ್ರಮವನ್ನು ಸ್ಥಾಪಿಸಿ ಇಂದಿಗೆ 100 ವರ್ಷ ಪೂರೈಸಿದೆ. ಇದರ ಸ್ಮರಣಾರ್ಥ ವಿಶೇಷ ರೈಲನ್ನು ಲೋಕಾರ್ಪಣೆಗೊಳಿಸಲಾಗಿದೆ.
ರೈಲ್ವೆ ಸಚಿವಾಲಯ, ಐಆರ್ಸಿಟಿಸಿ ಮತ್ತು ಗುಜರಾತ್ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಈ ರೈಲಿಗೆ ಚಾಲನೆ ನೀಡಿದೆ.
ಈ ವಿಶೇಷ ರೈಲು ಸ್ವಾತಂತ್ರ್ಯ ಚಳುವಳಿ ಮತ್ತು ಮಹಾತ್ಮಾ ಗಾಂಧೀಜಿಯವರಿಗೆ ಸಂಬಂಧಿಸಿದ ವಾರ್ಧಾ, ಮೋತಿಹಾರಿ, ಗಯಾ, ವಾರಣಾಸಿ, ಅಲಹಾಬಾದ್, ಸೂರತ್ನಂತಹ ಸ್ಥಳಗಳಿಗೆ ಪ್ರವಾಸಿಗರನ್ನು ಹೊತ್ತೊಯ್ಯಲಿದೆ. ಈ ರೈಲಿನಲ್ಲಿ ರೈಲ್ವೆ ಸಚಿವಾಲಯವು 9 ದಿನಗಳ ಪ್ರವಾಸವನ್ನು ಆಯೋಜಿಸಲಿದೆ.
ಈ ವಿಶೇಷ ರೈಲನ್ನು ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಗಾಂಧೀ ತತ್ವದೊಂದಿಗೆ ಭಾರತ ಮುಂದಕ್ಕೆ ಹೋಗುತ್ತದೆ ಎಂಬ ಭರವಸೆ ನಮಗಿದೆ ಎಂದು ಈ ವೇಳೆ ಸಿಎಂ ವಿಜಯ್ ರೂಪಾನಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.