ಕೊಚ್ಚಿ : ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಕೊಚ್ಚಿಯಲ್ಲಿ ಮಲ್ಟಿ ಮಾಡೆಲ್ ಕೊಚ್ಚಿ ಮೆಟ್ರೋ ರೈಲಿಗೆ ಚಾಲನೆ ನೀಡಿದರು.
ದೇಶದ ಮೊದಲ ಏಕೀಕೃತ ಮಲ್ಟಿ ಮಾಡೆಲ್ ಸಾರಿಗೆ ವ್ಯವಸ್ಥೆ ಇದಾಗಿದ್ದು ಕೇರಳದ ಮೊದಲ ಮೆಟ್ರೋ ಸೇವೆ ಕೂಡಾ ಇದಾಗಿದೆ. ಜವಾಹರ್ಲಾಲ್ ನೆಹರೂ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಉದ್ಘಾಟನಾ ಸಮಾರಂಭ ಸಭೆ ನಡೆಯಿತು.
Palarivattom to Pathadippalam.
ಪಳರಿವಟ್ಟಂನಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ಅಧಿಕೃತ ಚಾಲನೆ ನೀಡಿದ ಪ್ರಧಾನಿ ಮೋದಿಯವರು ಪಳರಿವೆಟ್ಟಂನಿಂದ ಪತಾಡಿಪ್ಪಳಂನವರೆಗೆ ಮೆಟ್ರೋ ಟ್ರೈನ್ ಮೂಲಕ ಸಂಚರಿಸಿದರು. ಬಳಿಕ ಉದ್ಘಾಟನಾ ಸಭೆ ನಡೆಯಲಿರುವ ಸ್ಟೇಡಿಯಂಗೆ ಆಗಮಿಸಿದರು.
ಭವಿಷ್ಯದ ದೂರದೃಷ್ಟಿತ್ವವುಳ್ಳ ಮೂಲಸೌಕರ್ಯಗಳು ಭಾರತದ ಪ್ರಗತಿಗೆ ಕೊಡುಗೆ ನೀಡುತ್ತದೆ ಎಂದು ಪ್ರಧಾನಿ ಮೋದಿ ಈ ಸಂದರ್ಭ ಹೇಳಿದರು.
ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಕೇರಳ ಗವರ್ನರ್ ಪಿ. ಸದಾಶಿವಂ, ಸಿಎಂ ಪಿನರಾಯಿ ವಿಜಯನ್, ಮೆಟ್ರೋ ಮ್ಯಾನ್ ಪಿ. ಶ್ರೀಧರನ್ ಅವರು ಉಪಸ್ಥಿತರಿದ್ದರು.
ಮೆಟ್ರೋ ರೈಲಿನ್ನು ಉದ್ಘಾಟಿಸಿದ ಪ್ರಧಾನಿ ಮೋದಿಯವರಿಗೆ ಧನ್ಯವಾದವನ್ನು ಅರ್ಪಿಸಿದ ಸಿಎಂ ಪಿನರಾಯಿ ವಿಜಯನ್ ಅವರು ಮೆಟ್ರೋ ರೈಲು ನಿರ್ಮಾಣದ ಹಿಂದಿರುವ ಎಲ್ಲ ಶ್ರಮಿಕರಿಗೂ ಅಭಿನಂದನೆ, ಧನ್ಯವಾದವನ್ನು ಸಲ್ಲಿಸಿ, ‘ಕನಸು ಇದೀಗ ವಾಸ್ತವವಾಗಿದೆ’ ಎಂದರು.
ಈ ಸಮಾರಂಭದ ಬಳಿಕ ಪ್ರಧಾನಿ ಮೋದಿಯವರು ಪತಂಜಲಿ ಯೋಗ ಶಿಬಿರದಲ್ಲಿ ಭಾಗವಹಿಸಲಿದ್ದು, ರೀಡಿಂಗ್ ಡೇ ಸ್ಮರಣಾರ್ಥ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಅಲ್ಲದೆ, ಸಿಎಂ ಪಿನರಾಯಿ ವಿಜಯನ್ ಮತ್ತು ಇತರ ಸಂಪುಟ ಸಚಿವರೊಂದಿಗೆ ಸಭೆ ನಡೆಸಿ ಕೇರಳದಲ್ಲಿ ಅನುಷ್ಠಾನಕ್ಕೆ ತರಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.