ಹೈದರಾಬಾದ್: ಶೀಘ್ರದಲ್ಲೇ ತೆಲಂಗಾಣದ ರೈತರು ತಮ್ಮ ದನ ಕರುಗಳನ್ನು ಆನ್ಲೈನ್ ಮೂಲಕ ಮಾರಾಟ, ಖರೀದಿ ಮಾಡಲಿದ್ದಾರೆ. ಇದಕ್ಕಾಗಿ ಅಲ್ಲಿನ ಸರ್ಕಾರ ವೆಬ್ಸೈಟ್ವೊಂದನ್ನು ತೆರೆಯಲಿದೆ.
‘pashubazar.telangana.gov.in ’ ಎಂಬ ವೆಬ್ಸೈಟ್ನ್ನು ಸರ್ಕಾರ ಆರಂಭಿಸಲಿದ್ದು, ರೈತರಿಗೆ ಇಲ್ಲಿ ತಮ್ಮ ದನ ಕರುಗಳನ್ನು ಮಾರಾಟ ಮಾಡಲು ಸಹಾಯವಾಗಲಿದೆ. ಪ್ರತಿ ಸಲ ದನಗಳನ್ನು ಮಾರಾಟ, ಖರೀದಿ ಮಾಡಲು ಅವುಗಳನ್ನು ಶಾಂಡೀಗಳಿಗೆ ಕರೆ ತರುವ ಪ್ರಮೇಯವಿರುವುದಿಲ್ಲ. ಸಾಗಾಣೆ ವೆಚ್ಚವನ್ನು ಉಳಿಸಬಹುದಾಗಿದೆ.
ಎನ್ಐಸಿ ಈ ವೆಬ್ಸೈಟ್ನ್ನು ಅಭಿವೃದ್ಧಿಪಡಿಸಿದ್ದು, ಪಶು ಸಂಗೋಪಣೆಯ ವಿಶೇಷ ಕಾರ್ಯದರ್ಶಿ ಸುರೇಶ್ ಚಂದಾ ಅವರು ಇದಕ್ಕೆ ಚಾಲನೆ ನೀಡಲಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದ ಗೋವು ಮಾರಾಟ ನಿಯಮಗಳನ್ನು ಪರಿಗಣನೆಗೆ ತೆಗೆದುಕೊಂಡು ವೆಬ್ಸೈಟ್ನಲ್ಲಿ ಅಳವಡಿಸಲಾಗುತ್ತದೆ ಎಂದು ಸುರೇಶ್ ಚಂದಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.