ನವದೆಹಲಿ: ಇನ್ನು ಎರಡು ವರ್ಷಗಳಲ್ಲಿ ದೇಶದ ಎಲ್ಲಾ 800 ಜಿಲ್ಲಾ ಹೆಡ್ ಪೋಸ್ಟ್ ಆಫೀಸುಗಳಲ್ಲಿ ಪಾಸ್ಪೋರ್ಟ್ ಸರ್ವಿಸ್ ಸೆಂಟರ್ಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ರಿಮೋಟ್ ಏರಿಯಾಗಳ ಜನರಿಗೂ ಸುಲಭವಾಗಿ ಸೌಲಭ್ಯಗಳು ಸಿಗಲಿ ಎಂಬ ಕಾರಣಕ್ಕೆ ಈ ಕಾರ್ಯ ಮಾಡುತ್ತಿದೆ.
ವಿದೇಶಾಂಗ ಸಚಿವಾಲಯದ ರಾಜ್ಯ ಖಾತೆ ಸಚಿವ ವಿ.ಕೆ.ಸಿಂಗ್ ಅವರು ಈ ಬಗ್ಗೆ ಫೋಷಣೆ ಮಾಡಿದ್ದು, 150 ಪೋಸ್ಟ್ ಆಫೀಸ್ ಸೇವಾ ಕೇಂದ್ರಗಳನ್ನು ಈ ವರ್ಷ ತೆರೆಯಲಾಗುತ್ತದೆ. ಎರಡು ವರ್ಷದೊಳಗೆ 800 ಜಿಲ್ಲಾ ಹೆಡ್ ಪೋಸ್ಟ್ ಆಫೀಸ್ಗಳಲ್ಲಿ ಪಾಸ್ಪೋರ್ಟ್ ಸೆಂಟರ್ಗಳನ್ನು ತೆರೆಯಲಾಗುತ್ತದೆ ಎಂದಿದ್ದಾರೆ.
ಪಾಸ್ಪೋರ್ಟ್ಗಾಗಿ ಯಾರೊಬ್ಬರೂ ಮೈಲಿಗಟ್ಟಲೆ ಪ್ರಯಾಣಿಸಬಾರದು ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಅಂಚೆ ಇಲಾಖೆ ಮತ್ತು ವಿದೇಶಾಂಗ ಸಚಿವಾಲಯದ ಜಂಟಿ ಪ್ರಯತ್ನದ ಫಲವಾಗಿ ಈ ಯೋಜನೆಯನ್ನು ಆರಂಭಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.