ಜೈಪುರ: ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ರಾಜಸ್ಥಾನ ಸರ್ಕಾರ ಅರ್ಹ ವಿರ್ದ್ಯಾಥಿನಿಯರಿಗೆ ಸ್ಕೂಟಿ ಮತ್ತು ನಗದು ಪುರಸ್ಕಾರವನ್ನು ಜಿಲ್ಲಾ ಮಟ್ಟಗಳಲ್ಲಿ ನೀಡಲು ನಿರ್ಧರಿಸಿದೆ.
12ನೇ ತರಗತಿಯಲ್ಲಿ ಟಾಪರ್ಗಳಾಗಿ ಹೊರಹೊಮ್ಮಿದ ಹುಡುಗಿಯರಿಗೆ ’ವರಿಶ್ತಾ ಉಪಾಧ್ಯಯ’ ಪರೀಕ್ಷೆಗಳನ್ನು ನಡೆಸಿ ಅದರಲ್ಲಿ ಉತ್ತಮ ಅಂಕ ಪಡೆದವರಿಗೆ ಸ್ಕೂಟಿ ಮತ್ತು ನಗದು ಪುರಸ್ಕಾರ ನೀಡಲಾಗುತ್ತದೆ.
8, 10ನೇ ತರಗತಿಯಲ್ಲೂ ಟಾಪರ್ ಆದವರಿಗೆ ನಗದು ಪುರಸ್ಕಾರವನ್ನು ನೀಡಲಾಗುತ್ತದೆ.
ಎಲ್ಲಾ ವರ್ಗದ ವಿದ್ಯಾರ್ಥಿನಿಯರಿಗೂ ಇದು ಅನ್ವಯವಾಗಲಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ಆರಂಭವಾಗಲಿದೆ.
8 ತರಗತಿಯವರಿಗೆ ೪೦ ಸಾವಿರ ನಗದು ಮತ್ತು 10 ಹಾಗೂ 12ನೇ ತರಗತಿ ಟಾಪರ್ಗಳಿಗೆ ಕ್ರಮವಾಗಿ 75 ಸಾವಿರ ಮತ್ತು 1 ಲಕ್ಷ ಬಹುಮಾನ ಸಿಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.