ನವದೆಹಲಿ: ಅತ್ಯಂತ ಕಠಿಣ ಯೋಗಾಸನ ‘ನಿರಾಲಂಬ ಪೂರ್ಣ ಚಕ್ರಾಸಣ’ವನ್ನು ಮೈಸೂರಿನ 13 ವರ್ಷದ ಬಾಲಕಿಯೊಬ್ಬಳು ಒಂದು ನಿಮಿಷದಲ್ಲಿ 15 ಬಾರಿ ಮಾಡಿ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾಳೆ. ಈ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ.
ಆರ್ಬಿಐ ಅಧಿಕಾರಿ ಹೇಮಚಂದ್ರ ಅವರು ಪುತ್ರಿ ಎಚ್.ಖುಷಿ ಅವರು ಜೂನ್ 10ರಂದು ಮೈಸುರಿನ ಕಮ್ಯೂನಿಟಿ ಹಾಲ್ನಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಈ ಸಾಧನೆ ಮಾಡಿದ್ದಾಳೆ.
ಸಂತೋಷ್ ಅಗರ್ವಾಲ್ ಅವರು ಆಕೆಗೆ ಗೋಲ್ಡನ್ ಬುಕ್ ವರ್ಲ್ಡ್ ರೆರ್ಕಾಡ್ಸ್ನ ಸರ್ಟಿಫಿಕೇಟ್ ನೀಡಿ ಗೌರವಿಸಿದ್ದಾರೆ.
ಚೀನಾದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಈಕೆ ಬೆಳ್ಳಿಯನ್ನು ಗೆದ್ದಿದ್ದಳು.
ವಿಯೆಟ್ನಾಂನಲ್ಲಿ ನಡೆದ ಸ್ಪರ್ಧೆಯಲ್ಲಿ 2 ಬಂಗಾರ, 2 ಬೆಳ್ಳಿಯನ್ನು ಈಕೆ ಜಯಿಸಿದ್ದಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.