ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ಹೊಸ ಬ್ಯಾಚ್ನ 500 ರೂಪಾಯಿಗಳ ಬ್ಯಾಂಕ್ ನೋಟುಗಳನ್ನು ಪರಿಚಯಿಸಿದ್ದು, ಇದರ ಎರಡೂ ಬದಿ ನಂಬರ್ ಪ್ಯಾನಲ್ಗಳು ಇನ್ಸೆಟ್ ಅಕ್ಷರ ’ಎ’ಯನ್ನು ಒಳಗೊಂಡಿದೆ. ‘ಇ’ ಸರಣಿಯ ಹಳೆ ನೋಟುಗಳು ವ್ಯಾಲಿಡ್ ಆಗಿರಲಿದೆ.
‘500 ಮುಖಬೆಲೆಯ ಮಹಾತ್ಮ ಗಾಂಧಿ(ಹೊಸ) ಸರಣಿಯ ಬ್ಯಾಂಕ್ ನೋಟುಗಳನ್ನು ಚಲಾವಣೆಗೊಳಿಸುವುದು ಕಾನೂನಾತ್ಮಕವಾಗಿದೆ. ಇದರಲ್ಲಿ ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಮತ್ತು ಮುದ್ರಣಗೊಂಡ ’2017’ ಇಸವಿ ಇರಲಿದೆ’ ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ನವೆಂಬರ್ ೮ರಿಂದ ಚಲಾವಣೆಗೆ ಬಂದ ಮಹಾತ್ಮ ಗಾಂಧಿ(ಹೊಸ) ಸರಣಿಯ 500ನೋಟುಗಳ ಮಾದರಿಯಲ್ಲೇ ಇದು ಇರಲಿದೆ. ಇದರ ನಂಬರ್ ಪ್ಯಾನೆಲ್ನಲ್ಲಿ ‘ಇ’ ಲೆಟರ್ ಮತ್ತು 2016 ಇಸವಿ ಇದ್ದು, ಇದರಲ್ಲಿ ‘ಎ’ ಲೆಟರ್ ಮತ್ತು ಇಸವಿ 2017 ಇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.