ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಜುಲೈನಿಂದ ಪರಿಷ್ಕೃತ ಭತ್ಯೆಗಳನ್ನು ಪಡೆಯುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಕೇಂದ್ರ ಸಂಪುಟವು ಎಂಪವರ್ಡ್ ಕಮಿಟಿ ಆಫ್ ಸೆಕ್ರಟರೀಸ್(E-CoS) ನೀಡಿದ ಪ್ರಸ್ತಾವಣೆಗಳ ಬಗ್ಗೆ ಇಂದು ಅಂತಿಮ ತೀರ್ಮಾಣವನ್ನು ತೆಗೆದುಕೊಳ್ಳಲಿದೆ.
ಲಾವಸ ಪ್ಯಾನೆಲ್ನ ಭತ್ಯೆಗಳ ಮೇಲಿನ ಶಿಫಾರಸ್ಸುಗಳನ್ನು ಪರಿಶೀಲಿಸುವ ಸಲುವಾಗಿ E-CoSನ್ನು॒ ರಚಿಸಲಾಗಿದ್ದು, ಇದು ತನ್ನ ಅಂತಿಮ ವರದಿಯನ್ನು ಕಳೆದ ವಾರ ಸಂಪುಟದ ಅನುಮೋದನೆಗಾಗಿ ಸಲ್ಲಿಕೆ ಮಾಡಿದೆ.
ಹಣಕಾಸು ಕಾರ್ಯದರ್ಶಿ ಅಶೋಕ್ ಲಾವಸ ಅವರ ನೇತೃತ್ವದ ಅತ್ಯುನ್ನತ ಪ್ಯಾನೆಲ್ ತನ್ನ ಅಂತಿಮ ವರದಿಯನ್ನು ಎಪ್ರಿಲ್ 27ರಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಸಲ್ಲಿಕೆ ಮಾಡಿತ್ತು.
ಎಕೆ ಮಾಥುರ್ ನೇತೃತ್ವದ 7ನೇ ವೇತನಾ ಆಯೋಗದ ಶಿಫಾರಸ್ಸುಗಳಿಗೆ ಎಂಪವರ್ಡ್ ಕಮಿಟಿ ಆಫ್ ಸೆಕ್ರೆಟರೀಸ್ ಬೆಂಬಲ ನೀಡಿದ್ದು, ಗೃಹ ಭತ್ಯೆಯನ್ನು ಶೇ.2-6ರವರೆಗೆ ಆಯಾ ನಗರ ರೀತಿಗೆ ಅನುಗುಣವಾಗಿ ತಗ್ಗಿಸಲಾಗುತ್ತದೆ.
ಇದರಿಂದಾಗಿ ಕೇಂದ್ರ ನೌಕರರು ತಿಂಗಳಿಗೆ 15 ಸಾವಿರದಷ್ಟು ಗೃಹಭತ್ಯೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.