ನವದೆಹಲಿ: ಭಾರತವನ್ನು ಜಗತ್ತಿನ ’ಫುಡ್ ಫ್ಯಾಕ್ಟರಿ’ಯನ್ನಾಗಿಸಲು ಸರ್ಕಾರ ಬಯಸಿದೆ ಮತ್ತು ಹೂಡಿಕೆದಾರರಿಗೆ ಸಂಪೂರ್ಣ ಪಾರದರ್ಶಕ ವಾತಾವರಣವನ್ನು ಕಲ್ಪಿಸಿಕೊಡಲು ಬದ್ಧವಾಗಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್ಸಿಮ್ರಾಟ್ ಕೌರ್ ಬಾದಲ್ ಹೇಳಿದ್ದಾರೆ.
ಕೇರಳದ ಪಲ್ಲಕಾಡ್ನಲ್ಲಿ ಕೆಐಎನ್ಎಫ್ಆರ್ಎ ಅಭಿವೃದ್ಧಿಪಡಿಸಿದ ಮೆಗಾ ಫುಡ್ ಪಾರ್ಕ್ಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಆಹಾರ ಸಂಸ್ಕರಣೆಯನ್ನು ಸರ್ಕಾರವೂ ಮೇಕ್ ಇನ್ ಇಂಡಿಯಾದ ಪ್ರಮುಖ ಏರಿಯಾವನ್ನಾಗಿಸಿದೆ ಎಂದರು.
ದೇಶದ ಆಹಾರ ಆರ್ಥಿಕತೆಗೆ ಚೇತರಿಕೆ ತರಲು ಮತ್ತು ಭಾರತವನ್ನು ಜಗತ್ತಿನ ‘ಫುಡ್ ಫ್ಯಾಕ್ಟರಿ’ಯನ್ನಾಗಿಸಲು ಸರ್ಕಾರ ಬಯಸಿದ್ದು, ಅದಕ್ಕಾಗಿ ಭಾರತದಲ್ಲಿ ಉದ್ಯಮ ಆರಂಭಿಸಲು ಬಯಸುವ ಹೂಡಿಕೆದಾರರಿಗೆ ಅತ್ಯಂತ ಸರಳ, ಸುಲಭ, ಪಾರದರ್ಶಕ ವಾತಾವರಣವನ್ನು ಕಲ್ಪಿಸಿಕೊಡಲು ಕಟಿಬದ್ಧವಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.