ಪಾಟ್ನಾ: ತನ್ನ ಮೀಸಲಾತಿ ವಿರೋಧಿ ಭಾಷಣದ ಮೂಲಕ ಪುಟ್ಟ ಬಾಲಕನೊಬ್ಬ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನೇ ಬೆಚ್ಚಿ ಬೀಳಿಸಿದ್ದಾರೆ.
ಚೌರಸಿಯಾ ಸಮುದಾಯ ಏರ್ಪಡಿಸಿದ ಕಾನ್ಫರೆನ್ಸ್ವೊಂದರಲ್ಲಿ ನಿತೀಶ್ ಭಾಗವಹಿಸಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ್ದ ಬಾಲಕ ಕುಮಾರ್ ರಾಜ್ ಚೌರಸಿಯಾ ಒಂದು ಪತ್ರ ಮತ್ತು ಹೂವಿನ ಮಾಲೆಯನ್ನು ಹಿಡಿದುಕೊಂಡು ವೇದಿಕೆ ಹತ್ತಲು ಹರಸಾಹಸ ಪಡುತ್ತಿದ್ದ. ಆದರೆ ಆತನ ಪ್ರಯತ್ನಕ್ಕೆ ಆಯೋಜಕರು ಅಡ್ಡಿಪಡಿಸುತ್ತಿದ್ದರು. ಇದನ್ನು ಗಮನಿಸಿದ ನಿತೀಶ್ ಆ ಬಾಲಕನನ್ನು ವೇದಿಕೆಗೆ ಬಿಡುವಂತೆ ಸೂಚಿಸಿದರು.
ತಕ್ಷಣವೇ ವೇದಿಕೆ ಮೇಲೆ ಬಂದ ಬಾಲಕ ನಿತೀಶ್ಗೆ ಹೂವಿನ ಮಾಲೆ ಹಾಕಿ ಭಾಷಣ ಆರಂಭಿಸಿಯೇ ಬಿಟ್ಟ. ಅದೂ ಪಕ್ಕಾ ಮೀಸಲಾತಿ ವಿರೋಧಿ ಭಾಷಣ. ಬಾಲಕನ ಭಾಷಣ ಕೇಳಿ ಅಲ್ಲಿದ್ದವರೆಲ್ಲಾ ಒಂದು ಕ್ಷಣಕ್ಕೆ ದಂಗಾಗಿ ಹೋದರು.
‘ಮುಖ್ಯಮಂತ್ರಿಗಳಿಗೆ ನೀವು ನಮ್ಮ ಸಮುದಾಯವನ್ನು ಹಿಂದುಳಿದ ಸಮುದಾಯ ಎಂದು ಘೋಷಿಸಿದ್ದು ಸಂತಸ ಆದರೆ ನಮ್ಮ ವ್ಯವಸ್ಥೆಯಲ್ಲಿ ಮೀಸಲಾತಿಯ ಅಗತ್ಯವಿಲ್ಲ, ವಿವಿಧ ರೀತಿಯ ಶಿಕ್ಷಣವೇ ನಮ್ಮ ಅಸಮಾನತೆಗೆ ಪ್ರಮುಖ ಕಾರಣವಾಗಿದೆ, ದೊಡ್ಡವರ ಮಕ್ಕಳು ಉತ್ತಮ ಸೌಲಭ್ಯ ಕೊಡುವ ಖಾಸಗಿ ಶಾಲೆಗೆ ಹೋಗುತ್ತಾರೆ, ಬಡವರು ಸರ್ಕಾರಿ ಶಾಲೆಗಳಿಗೆ ಹೋಗುತ್ತಾರೆ, ನಾನು ಪ್ರಧಾನಿಯಾದರೆ ಖಾಸಗಿ ಶಾಲೆಗಳನ್ನು ರದ್ದುಪಡಿಸಿ ಎಲ್ಲರಿಗೂ ಏಕ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸುತ್ತೇನೆ’ ಎಂದು ಭಾಷಣದಲ್ಲಿ ಹೇಳಿದ್ದಾನೆ.
ಮೀಸಲಾತಿಯಿಂದ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ನಿಮಗೆ ಅನಿಸುತ್ತಿದೆಯೇ? ಖಂಡಿತಾ ಇಲ್ಲ, ನೀವು ಮೀಸಲಾತಿಗಿಂತಲೂ ಹೆಚ್ಚಿನದನ್ನು ಯೋಚಿಸಬೇಕಾಗಿದೆ ಎಂದು ನೆರೆದಿದ್ದ ತನ್ನ ಸಮುದಾಯದವರಿಗೆ ಹೇಳಿದ್ದಾನೆ.
ನೆರೆದಿದ್ದ ಜನ ಬಾಲಕನ ಮಾತಿಗೆ ತಲೆದೂಗಿ ಚಪ್ಪಾಳೆ ತಟ್ಟಿದ್ದಾರೆ. ನಿತೀಶ್ ಅವರೂ ಬಾಲಕನನ್ನು ಅಭಿನಂದಿಸಿ, ಚಾಯ್ವಾಲ ಪ್ರಧಾನಿಯಾದಂತೆ ಪಾನ್ವಾಲನಾದ ನೀನು ಪ್ರಧಾನಿಯಾಗುತ್ತೀಯಾ ಎಂದಿದ್ದಾರೆ. ಬಾಲಕನ ತಂದೆ ಪಾನ್ವಾಲ ಆಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.