ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಜೂನ್ 26ರಂದು ವೈಟ್ಹೌಸ್ನಲ್ಲಿ ಭೇಟಿಯಾಗಲಿದ್ದಾರೆ.
ವೈಟ್ಹೌಸ್ನ ಪ್ರೆಸ್ ಸೆಕ್ರಟರಿ ಸೀನ್ ಸ್ಪೈಸರ್ ಮೋದಿ-ಟ್ರಂಪ್ ಭೇಟಿಯನ್ನು ಖಚಿತಪಡಿಸಿದ್ದಾರೆ.
ಉಭಯ ಮುಖಂಡರುಗಳು ಭಯೋತ್ಪಾದನೆ, ಎಚ್1-ವೀಸಾ ನಿಯಮಗಳ ಬಗೆಗಿನ ಭಾರತದ ಕಳವಳ ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
‘ಅಧ್ಯಕ್ಷ ಟ್ರಂಪ್ ಅವರು ಭಾರತದೊಂದಿಗಿನ ಭಾಂಧವ್ಯವನ್ನು ಗಟ್ಟಿಗೊಳಿಸುವತ್ತ ಒತ್ತು ನೀಡಲಿದ್ದಾರೆ. ಅಲ್ಲದೇ ಸಮಾನ ಪ್ರಾಮುಖ್ಯತೆಗಳಾದ ಭಯೋತ್ಪಾದನೆ, ಆರ್ಥಿಕ ಪ್ರಗತಿ ಮತ್ತು ಸುಧಾರಣೆ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭದ್ರತೆಯನ್ನು ವಿಸ್ತಾರಗೊಳಿಸುವಿಕೆಯ ಬಗ್ಗೆ ಉಭಯ ನಾಯಕರು ಸಮಾಲೋಚನೆ ನಡೆಸಲಿದ್ದಾರೆ’ ಎಂದು ಸೀನ್ ಸ್ಪೈಸರ್ ಹೇಳಿಕೆಯಲ್ಲಿ ತಿಳಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.