ನವದೆಹಲಿ: ಇನ್ನು ಮುಂದೆ ವಿಮಾನದಲ್ಲಿ ಪ್ರಯಾಣಿಸಲು ಇಚ್ಛಿಸಲಿರುವವರು ಟಿಕೆಟ್ ಬುಕ್ಕಿಂಗ್ ವೇಳೆ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ನ್ನು ಸಲ್ಲಿಕೆ ಮಾಡುವುದು ಕಡ್ಡಾಯವಾಗಲಿದೆ.
ಇನ್ನು ಮೂರು -ನಾಲ್ಕು ತಿಂಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ನೀಡಿರುವ ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಖಾತೆ ಸಚಿವ ಜಯಂತ್ ಸಿನ್ಹಾ ಅವರು, ‘ಇನ್ನು 30 ದಿನಗಳೊಳಗೆ ತಾಂತ್ರಿಕ ಸಮಿತಿಯು ಈ ಪ್ರಸ್ತಾವಣೆಯ ಬಗ್ಗೆ ಶ್ವೇತ ಪತ್ರವನ್ನು ಸಿದ್ಧಗೊಳಿಸಲಿದೆ’ ಎಂದಿದ್ದಾರೆ.
‘ವಿಭಿನ್ನ ಗುರುತಿಸುವಿಕೆಯನ್ನು ನಾವು ಸುರಕ್ಷಿತವಾಗಿಸಬೇಕಿದೆ. ಇದಕ್ಕೆ ಆಧಾರ್, ಪ್ಯಾನ್ ಕಾರ್ಡ್ ಮತ್ತು ಪಾಸ್ಪೋರ್ಟ್ನ್ನು ಬಳಕೆ ಮಾಡುವುದು ಸರಿಯಾದ ಮಾರ್ಗ. ಪ್ರಯಾಣಿಕರು ಪೇಪರ್ ರಹಿತವಾಗಿ ಹಾರಾಟದ ಅನುಭವ ಪಡೆಯಲು ಇದು ಉತ್ತೇಜನ ನೀಡುತ್ತದೆ’ ಎಂದಿದ್ದಾರೆ.
‘ಒಂದು ಬಾರಿ ಟಿಕೆಟ್ ಬುಕ್ ಮಾಡಿದರೆ, ಯುನಿಕ್ ಐಡಿ ಮತ್ತು ಪಿಎನ್ಆರ್ ಎಲ್ಲಾ ಮಾಹಿತಿಗಳನ್ನು ನೀಡುತ್ತದೆ ಮತ್ತು ಡಿಜಿಟಲ್ ಬೋರ್ಡಿಂಗ್ ಪಾಸ್ ಆಗಿ ಸೇವೆ ಮಾಡುತ್ತದೆ. ಆಧಾರ್ ಮೂಲಕ ಬಯೋಮೆಟ್ರಿಕ್ ಐಡೆಂಟಿಫಿಕೇಶನ್ ನೀಡುವವರು ಏರ್ಪೋರ್ಟ್ನಲ್ಲಿ ಫಿಂಗರ್ ಸ್ಕ್ಯಾನ್ಗೆ ಒಳಪಡಬೇಕು. ಉಳಿದ ದಾಖಲೆ ನೀಡುವವರ ಮೊಬೈಲ್ಗೆ QR ಸ್ಕ್ಯಾನ್ ಕಳಹಿಸಲಾಗುವುದು, ಅದನ್ನು ಬಳಿಕ ಏರ್ಪೋಟ್ನಲ್ಲಿ ಸ್ಕ್ಯಾನ್ಗೆ ಒಳಪಡಿಸಬೇಕು’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.