ಚಂಪಾರಣ್: ಮಹಾತ್ಮ ಗಾಂಧೀಜಿಯವರ ಚಂಪಾರಣ್ ಸತ್ಯಾಗ್ರಹಕ್ಕೆ 100 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ಯೋಗ ಗುರು ಬಾಬಾ ರಾಮ್ದೇವ್ ಅವರು ಬಿಹಾರದ ಚಂಪಾರಣ್ನಲ್ಲಿ 3 ದಿನಗಳ ಉಚಿತ ಯೋಗ ಶಿಬಿರ ನಡೆಸುತ್ತಿದ್ದಾರೆ.
ಗುರುವಾರ ಯೋಗ ಶಿಬಿರ ಆರಂಭಗೊಂಡಿದ್ದು, ಶನಿವಾರದವರೆಗೂ ಮುಂದುವರೆಯಲಿದೆ.
ಯೋಗ ಶಿಬಿರದ ಸಂದರ್ಭದಲ್ಲೇ ಸಂಜೆ 5 ಗಂಟೆಯಿಂದ ರಾತ್ರಿ 7.30ರವರೆಗೆ ಉಚಿತ ವೈದ್ಯಕೀಯ ಮತ್ತು ಧ್ಯಾನ ಶಿಬಿರಗಳೂ ನಡೆಯುತ್ತಿದೆ.
ಇಂಡಿಗೋವನ್ನು ಬೆಳೆಸುವಂತೆ ರೈತರನ್ನು ಒತ್ತಾಯಿಸುತ್ತಿದ್ದ ಬ್ರಿಟಿಷರ ವಿರುದ್ಧ ಪ್ರತಿಭಟಿಸಲು ಗಾಂಧೀಜಿಯವರು ಚಂಪಾರಣ್ ಸತ್ಯಾಗ್ರಹವನ್ನು 1917ರಲ್ಲಿ ಆರಂಭಿಸಿದರು.
ಬಿಹಾರ ಸರ್ಕಾರ ಕೂಡ ಚಂಪಾರಣ್ ಸತ್ಯಾಗ್ರಹದ ಸ್ಮರಣಾರ್ಥ ವರ್ಷ ಪೂರ್ತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.