ವಾಷಿಂಗ್ಟನ್: ಪಾಕಿಸ್ಥಾನದಲ್ಲಿ ಭಯೋತ್ಪಾದಕರಿಗೆ ಮತ್ತು ಕರಾಚಿ ಆಸ್ಪತ್ರೆಯಲ್ಲಿ ಇತ್ತೀಚಿಗೆ ಮೃತನಾದ ತಾಲಿಬಾನಿ ನಾಯಕನಿಗೆ ನಾವು ಸುರಕ್ಷಿತ ನೆಲೆಯನ್ನು ಕಲ್ಪಿಸಿಕೊಟ್ಟಿಲ್ಲ ಎಂದಿರುವ ಅಮೆರಿಕಾದಲ್ಲಿನ ಪಾಕಿಸ್ಥಾನ ರಾಯಭಾರಿ ಅಜೀಝ್ ಅಹ್ಮದ್ ಚೌಧರಿ ಅವರು ನಗೆಪಾಟಲಿಗೀಡಾಗಿದ್ದಾರೆ.
ಇತ್ತೀಚಿಗೆ ವಾಷಿಂಗ್ಟನ್ ಮೂಲದ ಅಟ್ಲಾಂಟಿಕ್ ಕೌನ್ಸಿಲ್ನಲ್ಲಿ ನಡೆದ ’ಅಫ್ಘಾನಿಸ್ಥಾನದಲ್ಲಿನ ಅಮೆರಿಕಾ ಸ್ಟ್ರ್ಯಾಟಜಿ ಬಗೆಗಿನ ಪ್ರಾದೇಶಿಕ ದೃಷ್ಟಿಕೋನಗಳು’ ಎಂಬ ಬಗ್ಗೆ ನಡೆದ ಪ್ಯಾನೆಲ್ ಡಿಸ್ಕಶನ್ ಸಂದರ್ಭ ಚೌಧರಿ ಈ ಮಾತನ್ನು ಹೇಳಿದ್ದಾರೆ.
‘ಯಾವ ಸುರಕ್ಷಿತ ತಾಣಗಳ ಬಗ್ಗೆ ನೀವು ಮಾತನಾಡುತ್ತಿದ್ದೀರಿ? ಭೂತಕಾಲದಲ್ಲೇ ಬದುಕಿದರೆ ವರ್ತಮಾನವನ್ನು ನಿಮಗೆ ಪರಿಹರಿಸಲು ಸಾಧ್ಯವಾಗಲಾರದು. ತಾಲಿಬಾನ್, ಹಕ್ಕಿನೇನಿ ನಮ್ಮ ಸ್ನೇಹಿತರಲ್ಲ. ಅವರು ನಮ್ಮ ಪ್ರತಿನಿಧಿಗಳಲ್ಲ. ಯಾವ ಕ್ವೆಟ್ಟ ಶುರ ಬಗ್ಗೆ ನೀವು ಮಾತನಾಡುತ್ತಿದ್ದೀರಿ ಪೇಶಾವರ ಶುರ ಎಂದರೇನು?’ ಎಂದು ಚೌಧರಿ ಹೇಳಿದ್ದಾರೆ.
ಅವರ ಈ ಮಾತು ಕೇಳಿ ನೆರೆದಿದ್ದ ವಾಷಿಂಗ್ಟನ್ ನಿವಾಸಿಗಳು ಒಂದು ಕ್ಷಣ ನಕ್ಕಿದ್ದಾರೆ. ಮತ್ತಿಬ್ಬರು ಪ್ಯಾನೆಲ್ ಡಿಸ್ಕಸ್ದಾರರಾದ ಭಾರತದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಮತ್ತು ಅಮೆರಿಕಾದ ಅಶ್ಲೆ ಟೆಲ್ಲಿಸ್ ಅವರು ಚೌಧರಿಯವರನ್ನು ಚರ್ಚೆಯಲ್ಲಿ ಸಂಪೂರ್ಣ ಮೂಲೆಗುಂಪು ಮಾಡಿದ್ದು, ಪಾಕಿಸ್ಥಾನ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.