ನವದೆಹಲಿ: 2013ರಿಂದ ಭಾರತದ ನೇರ ವಿದೇಶಿ ಬಂಡವಾಳವು 34.487 ಬಿಲಿಯನ್ ಡಾಲರ್ಗಳಿಂದ 61.724 ಬಿಲಿಯನ್ ಡಾಲರ್ಗಳಿಗೆ ಏರಿಕೆ ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸರ್ಕಾರದ ಮೂರು ವರ್ಷಗಳ ಆಡಳಿತದ ಬಗ್ಗೆ ಬೆಳಕು ಚೆಲ್ಲಿದ ಅವರು, ಜಾಗತಿಕ ಆರ್ಥಿಕತೆಯಲ್ಲಿ ಭಾರತ ಇಂದು ಉಜ್ವಲ ಸ್ಥಾನವನ್ನು ಕಂಡಿದೆ. ಇಲ್ಲಿ ಉದ್ಯಮ ಮಾಡುವುದು ಸರಳವಾಗಿದೆ ಮತ್ತು ಊಹಿಸಬಹುದಾದ ಮತ್ತು ಸ್ಥಿರ ತೆರಿಗೆ ಆಡಳಿತವನ್ನು ಪಡೆದಿದೆ ಎಂದಿದ್ದಾರೆ.
ಜಿಎಸ್ಟಿ ಕೂಡ ದೇಶಕ್ಕೆ ಸುಧೀರ್ಘ ಸಮಯದ ಲಾಭಗಳನ್ನು ನೀಡಲಿದೆ ಎಂದು ಲಿಂಕ್ಡ್ಇನ್ಗೆ ಬರೆದ ಬರವಣಿಗೆಯಲ್ಲಿ ತಿಳಿಸಿದ್ದಾರೆ.
2014ರಲ್ಲಿ ನಾವು ಆಡಳಿತಕ್ಕೆ ಬಂದಾಗ ದೇಶ ಸವಾಲುಗಳನ್ನು ಎದುರಿಸುತ್ತಿತ್ತು, ಸಂಸ್ಥೆ, ಸರ್ಕಾರದ ಮೇಲಿನ ನಂಬಿಕೆ ಹೊರಟು ಹೋಗಿತ್ತು. ಹೂಡಿಕೆ ಮಾಡುವ ತುಸು ಸಂಭಾವ್ಯತೆಯಿತ್ತಾದರೂ ಪ್ರೋತ್ಸಾಹ ಇರಲಿಲ್ಲ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಧಿಕಾರಿಗಳ ದರ್ಪ ಸಂಸ್ಥೆಯನ್ನು ಅಪಮಾನಕ್ಕೆ ದೂಡಿತ್ತು ಎಂದಿದ್ದಾರೆ.
ಈ ವಾತಾವಣವನ್ನು ಬದಲಾಯಿಸುವುದೇ ನಮ್ಮ ತ್ವರಿತ ಪ್ರಾಧಾನ್ಯತೆಯಾಯಿತು. ಕಳೆದ 3 ವರ್ಷಗಳಲ್ಲಿ ಇದನ್ನು ಬದಲಾಯಿಸಿದ್ದೇವೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.