ನವದೆಹಲಿ: ಜಮ್ಮು ಕಾಶ್ಮೀರದ ಗಡಿಯಲ್ಲಿ ಸದಾ ಭಾರತೀಯ ಸೇನೆಯನ್ನು ಗುರಿಯಾಗಿಸಿ ಪಾಕಿಸ್ಥಾನಿ ಸೈನಿಕರು ದಾಳಿಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಭಾರತೀಯ ಸೈನಿಕರೂ ಪ್ರತಿದಾಳಿಗಳನ್ನು ಮಾಡುತ್ತಿದ್ದಾರೆ.
ಆದರೆ ಉರಿ ಮತ್ತು ಪಠಾನ್ಕೋಟ್ ದಾಳಿಗಳಾದ ಬಳಿಕ ಭಾರತೀಯ ಸೇನೆ ಕುತಂತ್ರಿ ಪಾಕಿಸ್ಥಾನಿಯರಿಗೆ ವಿರುದ್ಧ ಆಕ್ರಮಣಕಾರಿ ಉತ್ತರ ನೀಡುತ್ತಿದೆ.
ಇದು ಪಾಕಿಸ್ಥಾನವನ್ನು ಕಂಗಾಲಾಗಿಸಿದೆ. ಎಷ್ಟರ ಮಟ್ಟಿಗೆ ಎಂದರೆ ಭಾರತದ ದಾಳಿಯಿಂದ ತನ್ನ ಎಷ್ಟು ಜನ ಸೈನಿಕರು ಮೃತರಾಗಿದ್ದಾರೆ ಎಂಬ ಲೆಕ್ಕವನ್ನೂ ಅದು ನೀಡುತ್ತಿಲ್ಲ.
ಅಲ್ಲಿನ ಸೆನೆಟ್ ಚೇರ್ಮನ್ ರಾಝಾ ರಬ್ಬಾನಿ ಅವರು ಎಲ್ಓಸಿಯಲ್ಲಿ ಮೃತರಾದ ಸೈನಿಕರ ಲೆಕ್ಕ ಕೊಡುವಂತೆ ಕೇಳಿದರೂ ಅಲ್ಲಿನ ಸೇನೆ ಮುಖ ಉಳಿಸಿಕೊಳ್ಳಲು ಲೆಕ್ಕ ಕೊಡುತ್ತಿಲ್ಲ ಎಂದು ನುಣುಚಿಕೊಂಡಿದೆ.
ರಕ್ಷಣಾ ಸಚಿವ ಖವಾಝಾ ಆಸೀಫ್ ಅವರು, ಭದ್ರತೆಯ ದೃಷ್ಟಿಯಿಂದ ಮೃತರಾದ ಯೋಧರ ಮಾಹಿತಿ ಕೊಡಲು ಸಾಧ್ಯವಿಲ್ಲ ಎಂದು ಸೆನೆಟ್ನಲ್ಲಿ ಹೇಳಿಕೆ ನೀಡಿದ್ದಾರೆ.
ಅಲ್ಲದೇ 66 ಮಂದಿ ನಾಗರಿಕರು ಮೃತರಾಗಿ, ೨೮೮ ಯೋಧರು ಗಾಯಗೊಂಡಿರಬಹುದು ಎಂದು ಅವರು ಹೇಳಿದ್ದಾರೆ.
ಆದರೆ ಭಾರತೀಯ ಮೂಲಗಳ ಪ್ರಕಾರ ೧೦ ತಿಂಗಳಲ್ಲಿ ೧೨೦-೧೩೦ ಮಂದಿ ಪಾಕ್ ಯೋಧರು ಮೃತರಾಗಿದ್ದಾರೆ. ಮುಖ ಉಳಿಸಿಕೊಳ್ಳಲು ಪಾಕ್ ಇದನ್ನು ಬಹಿರಂಗಪಡಿಸುತ್ತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.