ನವದೆಹಲಿ: ಯೋಗದ ಆರೋಗ್ಯ ಲಾಭಗಳ ಬಗ್ಗೆ ಪೋಸ್ಟರ್ ರಚಿಸುವ ಸ್ಪರ್ಧೆಯನ್ನು ಕೇಂದ್ರದ ಆಯುಷ್ ಸಚಿವಾಲಯ ಏರ್ಪಡಿಸಿದೆ. ಎರಡು ಕೆಟಗರಿಯಲ್ಲಿ ಈ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತಿದೆ.
1ರಿಂದ 5ನೇ ತರಗತಿವರೆಗೆ ಮಕ್ಕಳಿಗೆ ಮತ್ತು 6ರಿಂದ 12ನೇ ತರಗತಿವರೆಗೆ ಮಕ್ಕಳಿಗೆ ಯೋಗದ ಆರೋಗ್ಯ ಲಾಭಗಳು ಎಂಬ ಬಗ್ಗೆ ಎರಡು ಕೆಟಗರಿಯಲ್ಲಿ ಪೋಸ್ಟರ್ ರಚಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಎರಡು ಕೆಟಗರಿಯಿಂದ ಸಚಿವಾಲಯ 5 ವಿಜೇತರನ್ನು ಆಯ್ಕೆ ಮಾಡಲಿದೆ.
ಸ್ಪರ್ಧೆಗೆ ಭಾಗವಹಿಸುವವರು ಆಯುಷ್ ಸಚಿವಾಲಯದ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡಬೇಕು ಮತ್ತು ಟ್ವಿಟರ್ನ್ನು ಫಾಲೋ ಮಾಡಬೇಕಾಗಿದೆ.
ಪೋಸ್ಟರ್ನಲ್ಲಿ ಹಾಕಲಾದ ಕಂಟೆಂಟ್ಗಳನ್ನು ಸಚಿವಾಲಯ ಶಿಕ್ಷಣದ ಪ್ರಚಾರಕ್ಕಾಗಿ ಅಥವ ಇನ್ನಿತರ ಯಾವುದೇ ಕಾರ್ಯಕ್ಕಾಗಿ ಬಳಸಿಕೊಳ್ಳಲಿದೆ.
ಸ್ಪರ್ಧಾಳುಗಳು ಫೋಟೋ ಐಡಿ ಪ್ರೂಫ್, ಸ್ಕೂಲ್ ಐಡಿ, ಇಮೇಲ್, ವಿಳಾಸ, ದೂರವಾಣಿ ಸಂಖ್ಯೆಯನ್ನು ಒದಗಿಸುವುದು ಕಡ್ಡಾಯ.
ಕ್ಲಿಯರ್ ಸ್ಕ್ಯಾನ್ ಮಾಡಿದ ಪೋಸ್ಟರ್ನ್ನು socialmedia-ayush@gov.in ಗೆ ಕಳುಹಿಸಿಕೊಡಬೇಕು.
ಹೆಚ್ಚಿನ ಮಾಹಿತಿಗೆ ಈ ಲಿಂಕ್ಗಳನ್ನು ನೋಡಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.