ಕೋಲ್ಕತ್ತಾ: 2016ರಲ್ಲಿ ಸುಮಾರು 300 ಜಾತಿಯ ಸಸ್ಯಗಳನ್ನು ಪತ್ತೆ ಮಾಡಿರುವುದಾಗಿ ಬೊಟಾನಿಕಲ್ ಸರ್ವೇ ಆಫ್ ಇಂಡಿಯಾ ಹೇಳಿದೆ.
ಜೂನ್ 5ರಂದು ಬೊಟಾನಿಕಲ್ ಸರ್ವೇ ಆಫ್ ಇಂಡಿಯಾ ಬಿಡುಗಡೆಗೊಳಿಸಿರುವ ‘ದಿ ಪ್ಲಾಂಟ್ ಡಿಸ್ಕವರೀಸ್ 2016-ಎ ಕಾಂಪಿಲೇಶನ್’ನಲ್ಲಿ 2016ರಲ್ಲಿ 300 ಜಾತಿಯ ಸಸ್ಯಗಳನ್ನು ಪತ್ತೆ ಮಾಡಿದೆ ಎಂದು ಹೇಳಿದೆ.
ಇವುಗಳ ಪೈಕಿ 206 ತಳಿಗಳು ವಿಜ್ಞಾನಕ್ಕೆ ಹೊಸದಾಗಿದೆ. 113 ಸಸ್ಯಗಳು ಭಾರತದಲ್ಲಿ ಹೊಸ ವಿತರಣಾ ದಾಖಲೆಯನ್ನು ಹೊಂದಿದೆ.
ಹೊಸದಾಗಿ ಪತ್ತೆಯಾದ ಕಾಡು ಏಲಕ್ಕಿ, ಕಾಡು ಶೂಂಠಿ ಮುಂತಾದುವುಗಳು ಹೆಚ್ಚಿನ ಔಷಧೀಯ ಗುಣಲಕ್ಷಣಗಳನ್ನು ಹೊಂದಿದೆ. ಪಶ್ಚಿಮ ಘಟ್ಟಗಳಲ್ಲೇ ಹೆಚ್ಚಿನವು ಪತ್ತೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.