ಹೈದರಾಬಾದ್: ತನ್ನ ರಾಜ್ಯದಲ್ಲಿನ ಭ್ರಷ್ಟಾಚಾರವನ್ನು ಹೋಗಲಾಡಿಸಲು ಆಂಧ್ರಪ್ರದೇಶ ಅತ್ಯಂತ ವಿಭಿನ್ನ ಮಾರ್ಗವೊಂದನ್ನು ಕಂಡುಹಿಡಿದಿದೆ. ನಾಗರಿಕ ದೂರುಗಳು ಬಂದರೆ ಲಂಚ ಪಡೆದ ಹಣವನ್ನು ವಾಪಾಸ್ ಮಾಡುವಂತೆ ಸರ್ಕಾರ ಅಧಿಕಾರಿಗಳಿಗೆ ಸೂಚಿಸುತ್ತಿದೆ.
ಜನರ ಕುಂದು ಕೊರತೆಗಳನ್ನು ಆಲಿಸಲು ಮತ್ತು ಲಂಚಗುಳಿತವನ್ನು ತಡೆಯಲು ಆಂಧ್ರ 1100 ಸಹಾಯವಾಣಿ ಅಥವಾ ಪೀಪಲ್ ಫಸ್ಟ್ ಅಭಿಯಾನವನ್ನು ಆರಂಭಿಸಿದೆ. ಇದರಲ್ಲಿ ಜನ ಲಂಚ ಪಡೆದವರ ಬಗ್ಗೆ ದೂರುಗಳನ್ನು ನೇರವಾಗಿ ನೀಡಬಹುದು.
ಇದರ ಫಲವಾಗಿ ಗುಂಟೂರು, ಕಡಪ, ಕೃಷ್ಣ, ಕರ್ನೂಲ್ಗಳಲ್ಲಿ ಲಂಚ ಪಡೆದ ಅಧಿಕಾರಿಗಳು ನೇರವಾಗಿ ಸಂತ್ರಸ್ಥರ ಮನೆಗೆ ಹೋಗಿ ಅವರಿಂದ ಪಡೆದ ಲಂಚವನ್ನು ಅವರಿಗೆ ವಾಪಾಸ್ ಕೊಡುತ್ತಿದ್ದಾರೆ.
ಜನರು ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಲಂಚದ ಬಗ್ಗೆ ದೂರು ನೀಡಿದ ಬಳಿಕ ವಿಲೇಜ್ ಸೆಕ್ರಟರಿಯೊಬ್ಬ ತಾನು 10 ಗ್ರಾಮಸ್ಥರಿಂದ ಪಡೆದಿದ್ದ ತಲಾ 500 ರೂಪಾಯಿಗಳನ್ನು ಅವರಿಗೆಯೇ ವಾಪಾಸ್ ಕೊಟ್ಟಿದ್ದಾನೆ.
ಈ ಸಹಾಯವಾಣಿಯಿಂದಾಗಿ ಅಧಿಕಾರಿಗಳು ಲಂಚ ಪಡೆಯಲು ಭಯ ಬೀಳುತ್ತಿದ್ದಾರೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಭಯದಿಂದ ಲಂಚ ಕಡಿಮೆಯಾಗುತ್ತದೆ ಎಂಬ ಆಶಯ ನಮಗಿದೆ ಎಂದು ಸರ್ಕಾರ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.