ಮೊರದಾಬಾದ್: ದೇಗುಲಗಳಲ್ಲಿ ಅಳವಡಿಸಲಾಗಿದ್ದ ಲೌಡ್ ಸ್ಪೀಕರ್ಗಳನ್ನು ಹಿಂದೂಗಳು ತೆಗೆದು ಹಾಕಿದರೆ, ಮಸೀದಿಗಳಲ್ಲಿನ ಲೌಡ್ ಸ್ಪೀಕರ್ಗಳನ್ನು ಮುಸ್ಲಿಮರು ತೆಗೆದು ಹಾಕಿದ ಬಲು ಅಪರೂಪದ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿದೆ ಮೊರಾದಬಾದ್ನ ತ್ರಿಯಾದನ್ ಗ್ರಾಮ.
ಎರಡೂ ಧರ್ಮಗಳ ಧಾರ್ಮಿಕ ಕೇಂದ್ರಗಳಲ್ಲಿ ಲೌಡ್ ಸ್ಪೀಕರ್ಗಳನ್ನು ಅಳವಡಿಸಲಾಗಿದ್ದ ಕಾರಣ ಕಳೆದ 3 ವರ್ಷಗಳಲ್ಲಿ ಹಲವಾರು ಬಾರಿ ಉದ್ವಿಗ್ನ ಪರಿಸ್ಥಿತಿಗಳು ನಿರ್ಮಾಣಗೊಂಡಿವೆ. ಹೀಗಾಗೀ ಉಭಯ ಧರ್ಮಗಳ ಹಿರಿಯ ಮುಖಂಡರು ಸೇರಿ ಲೌಡ್ ಸ್ಪೀಕರ್ ತೆಗೆದುಹಾಕುವ ಕಾರ್ಯ ಮಾಡಿದ್ದಾರೆ.
ಈ ಕಾರ್ಯವನ್ನು ಪೊಲೀಸ್ ಅಧಿಕಾರಿಗಳೂ ಸ್ವಾಗತಿಸಿದ್ದಾರೆ, ಹಿರಿಯ ಮುಖಂಡರುಗಳನ್ನು ಅಭಿನಂದಿಸಿದ್ದಾರೆ.
ನಮ್ಮ ಗ್ರಾಮಕ್ಕೆ ಸಂಬಂಧಪಡದ ಕೆಲವರು ನಮ್ಮೊಳಗೆ ಧರ್ಮದ ವಿಷ ಬೀಜ ಬಿತ್ತುತ್ತಿದ್ದಾರೆ. ಇದರಿಂದ ಹಿಂಸಾಚಾರವಾಗುತ್ತಿತ್ತು. ಈಗ ನಾವು ಅವರ ಕೆಟ್ಟ ಯೋಜನೆಯನ್ನು ಅರ್ಥ ಮಾಡಿಕೊಂಡಿದ್ದೇವೆ. ಹೀಗಾಗಿ ಉಭಯ ಧರ್ಮದವರು ಒಟ್ಟಿಗೆ ಕೂತು ಒಂದು ನಿರ್ಧಾರಕ್ಕೆ ಬಂದೆವು. ಲೌಡ್ ಸ್ಪೀಕರ್ ತೆಗೆದು ಹಾಕಿದೆವು ಎಂದು ಗ್ರಾಮದ ಹಿರಿಯ ದಿನೇಶ್ ಸಿಂಗ್ ಹೇಳುತ್ತಾರೆ.
ರಂಜಾನ್ನಂತಹ ಪವಿತ್ರ ಮಾಸದಲ್ಲಿ ಲೌಡ್ ಸ್ಪೀಕರ್ ತೆಗೆಯುವ ನಿರ್ಧಾರ ಮಾಡಿದ್ದೇವೆ. ಹಿಂದೂ ಬಾಂಧವರು ಕೂಡ ಇದನ್ನೇ ಮಾಡಿದ್ದಾರೆ. ನಾವೀಗ ಇಲ್ಲಿ ಶಾಂತಿಯಿಂದ ಬದುಕಬಹುದು ಎಂದು ಗ್ರಾಮದ ಮುಸ್ಲಿಂ ಮುಖಂಡ ಝಾಕೀರ್ ಹುಸೇನ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.