ಮುಂಬಯಿ: ಮಹಾರಾಷ್ಟ್ರದಲ್ಲಿ ಸಾವಿತ್ರಿ ಮತ್ತು ಕಾಲ್ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಬ್ರಿಟಿಷ್ ಕಾಲದ ಸೇತುವೆ 2016ರ ಆಗಸ್ಟ್ 2ರಂದು ಮುರಿದು ಬಿದ್ದಿತ್ತು. ಇದೀಗ ಆ ಸೇತುವೆಯನ್ನು ದಾಖಲೆ ಎಂಬಂತೆ 165 ದಿನಗಳಲ್ಲಿ ಮರು ನಿರ್ಮಾಣಗೊಳಿಸಲಾಗಿದೆ.
184ಮೀಟರ್ ಮತ್ತು 5.90 ಮೀಟರ್ ಅಗಲವಿದ್ದ ಮಸ್ನೋರಿ ಸೇತುವೆ ಕಳೆದ ಆಗಸ್ಟ್ನಲ್ಲಿ ಮುರಿದು ಬಿದ್ದಿದ್ದು, 29 ಮಂದಿ ಈ ವೇಳೆ ಮೃತರಾಗಿದ್ದರು. ಈ ಸೇತುವೆಯನ್ನು ಆರು ತಿಂಗಳಲ್ಲಿ ಮರು ನಿರ್ಮಾಣ ಮಾಡುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದ್ದರು.
3 ವಾರಗಳೊಳಗೆ ಮಹಾರಾಷ್ಟ್ರ ಸಾರ್ವಜನಿಕ ಕಾರ್ಯ ಇಲಾಖೆ ಈ ಬಗ್ಗೆ ಸಮೀಕ್ಷೆ ನಡೆಸಿ, ವಿನ್ಯಾಸ ರಚಿಸಿ ಅದನ್ನು ರಸ್ತೆ ಸಾರಿ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸಲ್ಲಿಸಿತ್ತು. ಸೆಪ್ಟಂಬರ್ 2ರಂದು ಬಜೆಟ್ ಬಿಡುಗಡೆಯಾಯಿತು. ಸುಮಾರು 35.77 ಕೋಟಿ ರೂಪಾಯಿ ವೆಚ್ಚದಲ್ಲಿ 239 ಉದ್ದದ ಸೇತುವೆ ನಿರ್ಮಾಣಗೊಂಡಿದೆ. ನೆರೆ ಎಚ್ಚರಿಕೆ ವ್ಯವಸ್ಥೆ, ವಿದ್ಯುತ್ ದೀಪ, ಫುಟ್ಪಾತ್ನ್ನು ಇದು ಒಳಗೊಂಡಿದೆ.
ಜೂನ್ 5ರಂದು ನಿತಿನ್ ಗಡ್ಕರಿ ಈ ಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.