ನವದೆಹಲಿ: ಭಯೋತ್ಪಾದಕರನ್ನು ಛೂ ಬಿಟ್ಟು ತನ್ನನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಪಾಕಿಸ್ಥಾನದ ವಿರುದ್ಧ ಭಾರತಕ್ಕೆ ಶತ್ರುತ್ವ ಇರಬಹುದು, ಆದರೆ ಮಾನವೀಯತೆಯ ವಿಷಯ ಬಂದಾಗ ಭಾರತ ಶತ್ರುತ್ವವನ್ನು ಮರೆತು ಪಾಕಿಸ್ಥಾನಿಯರಿಗೆ ನೆರವಿನ ಹಸ್ತವನ್ನು ಸದಾ ಚಾಚಿದೆ.
ಇದಕ್ಕೆ ಉತ್ತಮ ಉದಾಹರಣೆ ಇತ್ತೀಚಿಗೆ ಪಾಕಿಸ್ಥಾನದ ಮಗುವೊಂದಕ್ಕೆ ಭಾರತದಲ್ಲಿ ಚಕಿತ್ಸೆ ಪಡೆಯಲು ನೆರವಾದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಕ್ರಮ.
ಪಾಕಿಸ್ಥಾನದ ಕೆನ್ ಸಿದ್ ಅವರ ಪುಟಾಣಿ ಮಗು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಭಾರತದಲ್ಲಿ ಚಿಕಿತ್ಸೆ ಕೊಡಿಸಲು ಅವರು ಬಯಸಿದ್ದರು. ಅದಕ್ಕಾಗಿ ಮೆಡಿಕಲ್ ವೀಸಾಗೂ ಅವರು ಅರ್ಜಿ ಸಲ್ಲಿಸಿದ್ದರು. ತ್ವರಿತ ವೀಸಾ ಅವರಿಗೆ ಸಿಗಲಿಲ್ಲ.
ಈ ಬಗ್ಗೆ ಅವರು ಪಾಕಿಸ್ಥಾನಿ ಹೈಕಮಿಷನರ್ ಅವರಿಗೆ ಟ್ವಿಟ್ ಕೂಡ ಮಾಡಿದ್ದರು. ಆದರೆ ಇಲ್ಲಿ ಅವರು ಸುಷ್ಮಾ ಅವರನ್ನು ಟ್ಯಾಗ್ ಮಾಡಿರಲಿಲ್ಲ. ಆದರೆ ಭಾರತದ ಇತರ ಟ್ವಿಟರ್ ಬಲಕೆದಾರರು ಕೆನ್ ಸಿದ್ ಅವರ ಬಗ್ಗೆ ಸುಷ್ಮಾ ಅವರಿಗೆ ಟ್ವಿಟರ್ನಲ್ಲಿ ತಿಳಿಸಿದ್ದು, ತಕ್ಷಣ ಅವರು ಪಾಕ್ನಲ್ಲಿನ ಭಾರತೀಯ ಹೈಕಮಿಷನನ್ನು ಸಂಪರ್ಕಿಸಿ ನಿಮಗೆ ವೀಸಾ ಸಿಗುತ್ತದೆ ಎಂದಿದ್ದರು. ಅದರಂತೆ ಸಿದ್ ಅವರಿಗೆ ವೀಸಾ ಸಿಕ್ಕಿದೆ.
ಇದಕ್ಕೆ ಭಾರತೀಯರಿಗೆ, ಸುಷ್ಮಾ ಅವರಿಗೆ ಧನ್ಯವಾದ ತಿಳಿಸಿರುವ ಸಿದ್ ಅವರು, ಟ್ವಿಟರ್ನಲ್ಲಿ ಜೈಹಿಂದ್ ಎಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.