ಸೈಂಟ್ ಪೀಟರ್ಸ್ಬರ್ಗ್: ಭಯೋತ್ಪಾದನೆಯನ್ನು ಜಾಗತಿಕ ಸಮಸ್ಯೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಉಗ್ರರಿಗೆ ಪೂರೈಕೆಯಾಗುತ್ತಿರುವ ಅನುದಾನ, ಶಸ್ತ್ರಾಸ್ತ್ರಗಳಿಗೆ ತಡೆಯೊಡ್ಡಬೇಕು ಎಂದು ವಿಶ್ವ ಸಮುದಾಯಕ್ಕೆ ಕರೆ ನೀಡಿದರು.
‘ನಿರ್ದಿಷ್ಟ ಘಟನೆಗಳಿಂದಾಚೆ ನಾವು ಎದ್ದೇಳಬೇಕು. ಭಯೋತ್ಪಾದನೆ ಮಾನವತೆಯ ಶತ್ರು. ಅದರ ವಿರುದ್ಧ ಹೋರಾಡಲು ಎಲ್ಲರೂ ಒಗ್ಗಟ್ಟಾಗಬೇಕು’ ಎಂದು ಮೋದಿ ಸೈಂಟ್ ಪೀಟರ್ಸ್ಬರ್ಗ್ನಲ್ಲಿನ ಇಂಟರ್ನ್ಯಾಷನಲ್ ಎಕನಾಮಿಕ್ ಫೋರಂನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಹೇಳಿದರು.
ಪಾಕಿಸ್ಥಾನವನ್ನು ಉಲ್ಲೇಖಿಸದೆ ಮಾತನಾಡಿದ ಅವರು, ‘ಭಯೋತ್ಪಾದಕರು ಶಸ್ತ್ರಾಸ್ತ್ರಗಳನ್ನು ಉತ್ಪಾದನೆ ಮಾಡುವುದಿಲ್ಲ, ಆದರೆ ಕೆಲವೊಂದು ರಾಷ್ಟ್ರಗಳು ಅವರಿಗೆ ಇವುಗಳನ್ನು ಪೂರೈಕೆ ಮಾಡುತ್ತವೆ. ಅಂತೆಯೇ ಉಗ್ರರು ಹಣವನ್ನು ಪ್ರಿಂಟ್ ಮಾಡುವುದಿಲ, ಕೆಲವು ದೇಶಗಳು ಅವರಿಗೆ ಹಣಕಾಸು ವಂಚನೆಯ ಮೂಲಕ ಹಣ ನೀಡುತ್ತವೆ ಎಂದಿದ್ದಾರೆ.
ಉಗ್ರರ ಬಳಿ ಟೆಲಿಕಮ್ಯೂನಿಕೇಷನ್ ವ್ಯವಸ್ಥೆ ಅಥವಾ ಸಾಮಾಜಿಕ ಜಾಲ ತಾಣವಿರೋದಿಲ್ಲ. ಅವರಿಗೆ ಕೆಲವೊಂದು ದೇಶಗಳು ಈ ವಲಯದಲ್ಲೂ ಸಹಾಯ ಮಾಡುತ್ತಿವೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.