ನವದೆಹಲಿ: ಕೇಂದ್ರದ ಮಹತ್ವದ ಸ್ಮಾರ್ಟ್ಸಿಟಿ ಯೋಜನೆಗೆ ಇದೀಗ ಮೊದಲ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸರ್ಕಾರದ ಈ ಪ್ರಯತ್ನವನ್ನು ಶ್ಲಾಘಿಸಿದ್ದು, ಭಾರತದ ಸ್ಮಾರ್ಟ್ಸಿಟಿಗಳು ಜಗತ್ತಿನಾದ್ಯಂತ ನಗರಗಳಿಗೆ ಲೈಟ್ಹೌಸ್ಗಳಾಗಲಿವೆ ಎಂದಿದೆ.
ಆರ್ಥಿಕ ಪ್ರಗತಿಯನ್ನು ಉತ್ತೇಜಿಸುವ ಮತ್ತು ಆಡಳಿತವನ್ನು ಸುಧಾರಿಸುವ ಮೂಲಕ 98 ನಗರಗಳನ್ನು ಸ್ಮಾರ್ಟ್ಸಿಟಿಯಾಗಿಸುವ ಯೋಜನೆಯನ್ನು ಸರ್ಕಾರ ಆರಂಭಿಸಿ ಎರಡು ವರ್ಷಗಳಾಗಿದ್ದು, ಅದರ ಬಗೆಗಿನ ಅಧ್ಯಯನಗಳು ಆರಂಭವಾಗಿದೆ.
2016ರ ಜನವರಿಯಲ್ಲಿ ಮೊದಲ ಹಂತವಾಗಿ 20 ನಗರಗಳನ್ನು ಸ್ಮಾಟ್ಸಿಟಿಯಾಗಿಸಲು ಆಯ್ಕೆ ಮಾಡಿಕೊಂಡ ತರುವಾಯ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಧ್ಯಯನವನ್ನು ಆರಂಭಿಸಿದೆ.
ಪ್ರತಿ ನಗರಗಳ ಪ್ರಸ್ತಾವಣೆಯನ್ನು ಅಧ್ಯಯನದಲ್ಲಿ ಪರಿಶೀಲಿಸಲಾಗಿದ್ದು, ಆಯ್ಕೆ ಪ್ರಕ್ರಿಯೆಯನ್ನು ತಿಳಿಯಲು ಸಂದರ್ಶನ ನಡೆಸಿದೆ ಮತ್ತು ಯೋಜನೆಯ ಗುಣಮಟ್ಟದ ಬಗ್ಗೆ ಪರಿಶೀಲನೆ ಮಾಡಿದೆ.
ಸ್ಥಳಿಯ ಸರ್ಕಾರಗಳಿಗೆ ನಗರಾಭಿವೃದ್ಧಿಗಾಗಿ ಅನುದಾನವನ್ನು ಹಂಚಿಕೆ ಮಾಡುವುದು ಸ್ಮಾರ್ಟ್ ಸಿಟಿ ಯೋಜನೆಯಲ್ಲಿರುವ ಅತ್ಯಂತ ನವೀನ ಆಯಾಮ ಎಂದು ಅಧ್ಯಯನ ಬಣ್ಣಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.