ನವದೆಹಲಿ: ಕಝಕೀಸ್ತಾನದ ಅಸ್ತಾನದಲ್ಲಿ ನಡೆಯಲಿರುವ ಸಮಿತ್ ಮಟ್ಟದ ಸಭೆಯ ಸಂದರ್ಭ ಭಾರತ ಶಾಂಘೈ ಕೊಅಪರೇಶನ್ ಆರ್ಗನೈಜೇಶನ್ನ(ಎಸ್ಸಿಓ) ಪೂರ್ಣ ಸದಸ್ಯತ್ವವನ್ನು ಪಡೆಯಲಿದೆ ಎಂದು ಭಾರತ ಮತ್ತು ರಷ್ಯಾ ತಿಳಿಸಿದೆ.
ಈ ಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ.
ಭಾರತ ಮತ್ತು ಪಾಕಿಸ್ಥಾನವನ್ನು ಎಸ್ಸಿಓದ ಪೂರ್ಣ ಸದಸ್ಯ ರಾಷ್ಟ್ರವನ್ನಾಗಿಸುವ ಪ್ರಕ್ರಿಯೆ ಅಂತ್ಯಗೊಂಡಿದ್ದು, ಕಝಕೀಸ್ತಾನದಲ್ಲಿ ನಡೆಯಲಿರುವ ರಾಜಕೀಯ ಮತ್ತು ಭದ್ರತಾ ಗ್ರೂಪಿಂಗ್ ಸಮಿತ್ ಸಭೆಯಲ್ಲಿ ಇದು ಅಧಿಕೃತಗೊಳ್ಳಲಿದೆ ಎಂದು ಚೀನಾ ಹೇಳಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೂ ಭಾರತದ ಎಸ್ಸಿಓದ ಪೂರ್ಣ ಸದಸ್ಯನಾಗಲಿದೆ ಎಂದು ಗುರುವಾರ ಘೋಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.