ನವದೆಹಲಿ: 2014ರ ಜಮ್ಮು ಕಾಶ್ಮೀರದ ಉಧಮ್ಪುರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಶೇ.85ರಷ್ಟು ಅಂಗವೈಕಲ್ಯಕ್ಕೆ ಒಳಗಾಗಿರುವ ಬಿಎಸ್ಎಫ್ ಕಾನ್ಸ್ಸ್ಟೇಬಲ್ ಗೋಧ್ರಾಜ್ ಮೀನಾ ಅವರನ್ನು ಶಿಷ್ಟಾಚಾರ ಬದಿಗಿಟ್ಟು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಆಲಂಗಿಸಿದ್ದಾರೆ.
2014ರ ಆಗಸ್ಟ್ 5ರಂದು ಉಧಮ್ಪುರದ ನರ್ಸು ನಲಹ ಸಮೀಪ ಮೀನಾ ಅವರು ತೆರಳುತ್ತಿದ್ದ ಬಸ್ ಮೇಲೆ ಉಗ್ರರ ದಾಳಿ ನಡೆದಿತ್ತು. ಈ ವೇಳೆ ಸಾಹಸಮೆರೆದ ಮೀನಾ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದರು. ಅಲ್ಲದೇ 30 ಮಂದಿ ಸೈನಿಕರಿದ್ದ ಬಸ್ನೊಳಕ್ಕೆ ಉಗ್ರರು ನುಸುಳದಂತೆ ಮಾಡಲು ಸಫಲರಾಗಿದ್ದರು. ಆದರೆ ಅವರ ಮೇಲೆ ಉಗ್ರರ ಗುಂಡೇಟು ಬಿದ್ದಿತ್ತು.
ಗುಂಡು ಅವರ ದವಡೆಯನ್ನು ಸೀಳಿ ಹೋದ ಕಾರಣ ಇದೀಗ ಮೀನಾ ಅವರಿಗೆ ಸರಿಯಾಗಿ ಮಾತನಾಡಲು ಆಗುತ್ತಿಲ್ಲ. ನಡೆಯಲೂ ಆಗುವುದಿಲ್ಲ. ಅವರಿಗೆ ರಾಜನಾಥ್ ಸಿಂಗ್ ಅವರು ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಮಾತ್ರವಲ್ಲ ಶಿಷ್ಟಾಚಾರ ಮರೆತು ಪ್ರೀತಿಯಿಂದ ಆಲಂಗಿಸಿದ್ದಾರೆ. ಈ ವೇಳೆ ಅಲ್ಲಿ ಪ್ರಸ್ತುತರಿದ್ದ ಎಲ್ಲಾ ಯೋಧರ, ಅಧಿಕಾರಿಗಳ ಕರತಾಡನ ಮುಗಿಲುಮುಟ್ಟಿತ್ತು.
ಈಗಲೂ ಸಮವಸ್ತ್ರವನ್ನು ತೊಟ್ಟು ಶಿಸ್ತಿನ ಸಿಪಾಯಿಯಂತೆ ಮೀನಾ ಅವರು ಕಾರ್ಯಮಾಡುತ್ತಾರೆ. ಅವರ ಅಂಗವೈಕಲ್ಯ ಅವರನ್ನು ದೇಶಸೇವೆಯಿಂದ ವಿಮುಖಗೊಳಿಸಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.