ನವದೆಹಲಿ: 2017-18ರ ಮೊದಲ ತ್ರೈಮಾಸಿಕದಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತ ಅತಿ ವೇಗದ ಆರ್ಥಿಕ ಪ್ರಗತಿಯುಳ್ಳ ರಾಷ್ಟ್ರ ಎಂಬ ಬಿರುದನ್ನು ಮರು ಪಡೆಯಲಿದೆ ಎಂದು ನೀತಿ ಆಯೋಗದ ಮುಖ್ಯಸ್ಥ ಅರವಿಂದ್ ಪನಾಗರಿಯಾ ಹೇಳಿದ್ದಾರೆ.
ಭಾರತದ ವಾರ್ಷಿಕ ಮೂಲಕ ಚೀನಾಗಿಂತ ಮುಂದಿದ್ದು, ನರೇಂದ್ರ ಮೋದಿ ಸರ್ಕಾರ ತೆಗೆದುಕೊಂಡ ಕ್ರಮಗಳಿಂದಾಗಿ ಆರ್ಥಿಕತೆ ಶೀಘ್ರದಲ್ಲೇ ಪ್ರಗತಿಯ ಪಥವನ್ನು ಮರು ಪಡೆದುಕೊಳ್ಳಲಿದೆ ಎಂದಿದ್ದಾರೆ.
ಮಾರ್ಚ್ ತಿಂಗಳಲ್ಲಿ ವೇಗದ ಆರ್ಥಿಕ ಪ್ರಗತಿಯ ರಾಷ್ಟ್ರ ಬಿರುದನ್ನು ಭಾರತ ಕಳೆದುಕೊಂಡಿತು. ಶೇ.6.1ರಷ್ಟು ಜಿಡಿಪಿ ದರವನ್ನು ಭಾರತ ಹೊಂದಿದ್ದರೆ ಶೇ.6.9ರಷ್ಟು ಜಿಡಿಪಿಯನ್ನು ಚೀನಾ ಹೊಂದಿತ್ತು.
2017-18ರ ಮೊದಲ ತ್ರೈಮಾಸಿಕದಲ್ಲಿ ಭಾರತ ತನ್ನ ವೇಗದ ಆರ್ಥಿಕ ಪ್ರಗತಿ ಕಾಣುತ್ತಿರುವ ದೇಶ ಬಿರುದನ್ನು ಮರು ಪಡೆದುಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.