ದೆಹಲಿ : ಭಾರತದ ಮೊದಲ ಪ್ರಧಾನಿಯಾಗಿದ್ದ ಜವಹಾರ್ ಲಾಲ್ ನೆಹರೂ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ರವರು ತನ್ನ ಸೇನಾಪಡೆ ಐ.ಎನ್.ಎಸ್.ಗಾಗಿ ಸಂಗ್ರಹಿಸಿದ ಯುದ್ಧನಿಧಿ ಸಂರಕ್ಷಣೆಯಲ್ಲಿ ನಿರಾಸಕ್ತಿ ತೋರಿದ್ದರು ಎಂದು ಆಂಗ್ಲ ಮಾಧ್ಯಮವೊಂದು ವರದಿಮಾಡಿದೆ. ಈ ಹಿಂದೆ ನೆಹರೂ ಅವರು 2 ದಶಕಗಳ ಕಾಲ ನೇತಾಜಿ ಕುಟುಂಬದವರ ಮೇಲೆ ಗೂಢಚಾರಿಕೆ ನಡೆಸಿದ ವಿಷಯ ಬಹಿರಂಗಗೊಂಡಿತ್ತು.
ನೇತಾಜಿ ಭಾರತದ ಸ್ವಾತಂತ್ರ್ಯಕ್ಕಾಗಿ ಐ.ಎನ್.ಎಸ್. ಎಂಬ ಸೇನೆಯನ್ನು ಸ್ಥಾಪಿಸಿದ್ದರು. ಅದಕ್ಕಾಗಿ ಅವರು ನಿಧಿಸಂಗ್ರಹ ಕೆಲಸದಲ್ಲಿ ತೋಡಗಿದ್ದರು. ನೇತಾಜಿ ಅವರ 48 ಜನ್ಮ ದಿನಾಚರಣೆ ಸಂಧರ್ಭ ಬರ್ಮಾ ರಾಜಧಾನಿಯಲ್ಲಿ ಭಾರತೀಯ ಮೂಲದರಿಂದ ನೇತಾಜಿ ಅವರ ತುಲಾಭಾರ ಚಿನ್ನದಲ್ಲಿ ಮಾಡಿಸಿ ಐಎನ್ಎಗೆ ದೇಣಿಗೆ ನೀಡಲಾಗಿತ್ತು.
ಕೋಟ್ಯಾಂತರ ರೂಪಾಯಿ ಕೆ.ಜಿಗಟ್ಟಲೆ ಬಂಗಾರ:ಐಎನ್ಎ ಸೇನೆಗೆ ದೇಣಿಗೆ ರೂಪದಲ್ಲಿ ಸುಮಾರು 80 ಕೆ.ಜಿ.ಚಿನ್ನ ಬಂದಿತ್ತು. ದೇಣಿಗೆ ರೂಪದಲ್ಲಿ ಹೀರಾಬೆನ್ ಬೆಟಾನಿ ತಮ್ಮ ಬಳಿಯಿದ್ದ 13 ಚಿನ್ನದ ನೆಕ್ಲೇಸ್ಗಳನ್ನು ನೀಡಿದ್ದರು, ಹಬೀಬ್ ಸಾಹೇಬ್ ಎಂಬ ಧನಿಕನಿಂದ 1 ಕೋಟಿ ಮೊತ್ತದ ಆಸ್ತಿ ಹಾಗೂ ಉದ್ಯಮಿ ಚೆಲ್ಲಯ್ಯ ನಾದರ್ಎಂಬವರು 42 ಕೋಟಿ ರೂ. ಹಾಗೂ 2800 ಚಿನ್ನದ ನಾಣ್ಯಗಳನ್ನು ಬೊಕ್ಕಸಕ್ಕೆ ಸೇರಿತ್ತು ಎನ್ನಲಾಗುತ್ತಿದೆ.
ಖಜಾನೆ ಕೊಳ್ಳೆ ಹೊಡೆದವರಾರು?
ನೇತಾಜಿ ಆತ್ಮೀಯರಾಗಿದ್ದ ಎಂ. ರಾಮಮೂರ್ತಿ, ಅವರ ಸೋದರ ಜೆ. ಮೂರ್ತಿ ಹಾಗೂ ಅಯ್ಯರ್ ಅವರು ಕೊಳ್ಳೆ ಹೊಡೆದ ಸಂಶಯವಿದೆ ಎಂದು ಅಂದು ಟೋಕಿಯೋದಲ್ಲಿನ ಭಾರತೀಯ ಸಂಪರ್ಕ ಮಿಷನ್ ಮುಖ್ಯಸ್ಥರಾಗಿದ್ದ ಬೆಂಗಾಲ್ ರಾಮರಾವ್ ಪತ್ರ ಮೂಲಕ ವಿದೇಶಾಂಗ ಇಲಾಖೆಗೆ ತಿಳಿಸಿದ್ದರು. ಅದರ ನಂತರ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಆರ್. ಡಿ ಸೇಥ್ ಅವರೂ ಪತ್ರದ ಮೂಲಕ ವಿದೇಶಾಂಗ ಇಲಾಖೆಗೆ ಗಮನಕ್ಕೆ ಮತ್ತು ನೆಹರೂ ಅವರ ಗಮನಕ್ಕೂ ತಂದರು. ಆದರೂ ಈ ಬಗ್ಗೆ ನಿರ್ಲಕ್ಷ ವಹಿಸಲಾಯಿತು.
ಮಾಹಿತಿ ಬಹಿರಂಗಗೊಂಡಿದ್ದು ಹೇಗೆ?
ಕಳೆದ 6ದಶಕಗಳಿಂದ ಪ್ರಧಾನಿ ಕಾರ್ಯಾಲಯ ಹಾಗೂ ವಿದೇಶಾಂಗ ಸಚಿವಾಲಯ ನೇತಾಜಿಗೆ ಸಂಬಂಧಿಸಿದ ಹಲವು ಕಡತಗಳನ್ನು ನಿರ್ವಹಿಸುತ್ತಿದೆ, ಈ ಕಡತಗಳಲ್ಲಿ ಐ.ಎನ್.ಎಸ್. ಬೊಕ್ಕಸ ಎಂಬ ವಿಭಾಗವಿದೆ, ನೇತಾಜಿ ಸಂಗ್ರಹಿಸಿದ್ದ ಯುದ್ಧನಿಧಿ ಮತ್ತು ಯುದ್ಧನಿಧಿ ನಾಪತ್ತೆ ಬಗ್ಗೆ ನಡೆದ ಪತ್ರವ್ಯವಹಾರ, ತನಿಖೆ ಮತ್ತಿತರ ವಿವರಗಳನ್ನು ಈ ಕಡತ ಒಳಗೊಂಡಿವೆ. ಇದರಲ್ಲಿನ ಮಾಹಿತಿಗಳು ಹೊರಬಿದ್ದಿದ್ದು, ಸ್ವತಂತ್ರ ಭಾರತದ ಮೊಟ್ಟಮೊದಲ ಹಗರಣ ಇದಾಗಿದೆ ಎಂದೇ ಬಣ್ಣಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.