ನವದೆಹಲಿ: ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿರುವ ಹಿನ್ನಲೆಯಲ್ಲಿ ಟ್ವಿಟ್ ಮಾಡಿರುವ ಮೋದಿ, ಯೋಗಾಭ್ಯಾಸವನ್ನು ಶ್ಲಾಘಿಸಿದ್ದಾರೆ. ಅಲ್ಲದೇ ಯೋಗವನ್ನು ಒಟ್ಟುಗೂಡಿಸುವ ಶಕ್ತಿ ಎಂದು ಬಣ್ಣಿಸಿದ್ದಾರೆ.
‘ಯೋಗ ಜಗತ್ತನ್ನು ಒಟ್ಟುಗೂಡಿಸುತ್ತದೆ. ಬನ್ನಿ, ಯೋಗವನ್ನು ಜನಪ್ರಿಯಗೊಳಿಸುವ ಚಳುವಳಿಯಲ್ಲಿ ಯೋಗಿಗಳಾಗಿರಿ, ಉತ್ತಮ ಮತ್ತು ಆರೋಗ್ಯಕರ ಸಮಾಜವನ್ನು ಸೃಷ್ಟಿಸಿ’ ಎಂದು ಕರೆ ನೀಡಿದ್ದಾರೆ.
‘ಜೂನ್ 21ರಂದು 3ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಜಗತ್ತು ಒಟ್ಟಗೂಡುತ್ತದೆ. ನಾವೆಲ್ಲ ಸೇರಿ ಈ ಸಂದರ್ಭವನ್ನು ಸ್ಮರಣೀಯಗೊಳಿಸೋಣ’ ಎಂದಿದ್ದಾರೆ.
ಅಲ್ಲದೇ ಮುಂದಿನ ಮೂರು ವಾರಗಳ ಕಾಲ ಯೋಗಗೆ ಸಂಬಂಧಿಸಿದ ವಿವಿಧ ಆಯಾಮಗಳ ಬಗ್ಗೆ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.
ಅಲ್ಲದೇ ಯೋಗಭ್ಯಾಸಕ್ಕೂ ಮೊದಲು ಸಾಮಾನ್ಯವಾಗಿ ಮಾಡುವ ಸಂಸ್ಕೃತ ಪ್ರಾರ್ಥನೆಯೊಂದನ್ನು ಹಂಚಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.