ನವದೆಹಲಿ: ಖಾದಿಯನ್ನು ದೇಶೀಯ ಮಟ್ಟದಲ್ಲಿ ಪ್ರಚಾರ ಪಡಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ವಿದೇಶಕ್ಕೂ ಖಾದಿಯನ್ನು ಪಸರಿಸಲು ಮುಂದಾಗಿದೆ.
ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಸಮಿತಿ(ಕೆವಿಐಸಿ) ಈಗಾಗಲೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (ಯುಎನ್ಎಚ್ಸಿಆರ್) ಗೆ ಪತ್ರ ಬರೆದಿದ್ದು, ತನ್ನ ಫೀಲ್ಡ್ ಆಪರೇಶನ್ ಮತ್ತು ಕ್ಯಾಂಪ್ಗಳಲ್ಲಿ ಖಾದಿಯನ್ನು ಬಳಸುವಂತೆ ಮನವಿ ಮಾಡಿದೆ.
‘ನಿರಾಶ್ರಿತ ಪ್ರದೇಶಗಳಲ್ಲಿ ಖಾದಿ ಅನುಕೂಲತೆ, ಆರಾಮದಾಯಕತೆ ಮತ್ತು ಆರೋಗ್ಯ ಲಾಭಗಳನ್ನು ನೀಡುತ್ತದೆ, ಮಾತ್ರವಲ್ಲದೇ ಪಾರಂಪರಿಕ ವೃತ್ತಿಯನ್ನು ಆಯ್ದುಕೊಂಡ ಗ್ರಾಮೀಣ ಭಾರತೀಯರಿಗೆ ಸ್ವಾವಲಂಬನೆ ಮತ್ತು ಸ್ಥಿರ ಬದುಕಿಗೂ ಆಸರೆ ನೀಡುತ್ತದೆ’ ಎಂದು ಕೆವಿಐಸಿ ಮುಖ್ಯಸ್ಥ ವಿಕೆ ಸಕ್ಸೇನಾ ಅವರು ಯುಎನ್ಎಚ್ಸಿಆರ್ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕೆವಿಐಸಿಯು ಕೈಮಗ್ಗ ಮತ್ತು ಕಾಟೇಜ್ ಇಂಡಸ್ಟ್ರಿಯನ್ನು ಪ್ರಚುರಪಡಿಸುವ ಸರ್ಕಾರಿ ಸಂಸ್ಥೆಯಾಗಿದೆ.
ಈಗಾಗಲೇ ಆಸ್ಪತ್ರೆ, ರೈಲ್ವೇ, ಏರ್ಲೈನ್ಗಳಲ್ಲಿ, ಕಛೇರಿಗಳಲ್ಲಿ ಖಾದಿಯ ಬಳಕೆಯನ್ನು ಕೇಂದ್ರ ಉತ್ತೇಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.