ಚೆನ್ನೈ: ಇತ್ತೀಚಿಗೆ ಮದ್ರಾಸ್ ಐಐಟಿಯಲ್ಲಿ ಭೀಫ್ ಫೆಸ್ಟ್ ಆಯೋಜಿಸಿದ್ದ ಸಂಶೋಧಕ ವಿದ್ಯಾರ್ಥಿಯ ಮೇಲೆ ನಡೆದ ಹಲ್ಲೆ ಪ್ರಕರಣ ದೇಶದಾದ್ಯಂತ ಭಾರೀ ಸುದ್ದಿ ಮಾಡಿತ್ತು. ಹಲವು ಬುದ್ಧಿಜೀವಿಗಳು ಇದನ್ನು ಖಂಡಿಸಿ ಆತನ ಪರ ದೊಡ್ಡದಾಗಿಯೇ ಧ್ವನಿಯೆತ್ತಿದ್ದರು.
ವಧೆಗಾಗಿ ಗೋವುಗಳ ಮಾರಾಟ ನಿಷೇಧಪಡಿಸಿದ ಕೇಂದ್ರದ ನಿರ್ಧಾರವನ್ನು ಪ್ರತಿಭಟಿಸಲು ಅಂಬೇಡ್ಕರ್ ಪೆರಿಯಾರ್ ಸ್ಟುಡೆಂಟ್ ಸರ್ಕಲ್ನ ಸದಸ್ಯನಾದ ಸೂರಜ್ ಎಡಪಂಥೀಯ ವಿದ್ಯಾರ್ಥಿಗಳನ್ನೆಲ್ಲ ಒಟ್ಟು ಸೇರಿಸಿ ಬೀಫ್ ಫೆಸ್ಟ್ ಆಯೋಜನೆ ಮಾಡಿದ್ದ.
ತನ್ನ ಪಾಡಿಗೆ ಬೀಫ್ ತಿನ್ನತ್ತಾ ಕುಳಿತಿದ್ದರೆ ಈತನಿಗೆ ಏಟು ಬೀಳುತ್ತಿರಲಿಲ್ಲ, ಆದರೆ ಈತ ಅಸಲಿಗೆ ಮಾಡಿದ್ದೇನೆಂದರೆ ಜೈನ್ ಕ್ಯಾಂಟೀನ್ನೊಳಗೆ ನುಗ್ಗಿ ಅಲ್ಲಿ ವೆಜ್ ತಿನ್ನುತ್ತಾ ಕುಳಿತಿದ್ದ ವಿದ್ಯಾರ್ಥಿಗಳನ್ನು ವ್ಯಂಗ್ಯವಾಡಿದ್ದಾನೆ. ಮಾತ್ರವಲ್ಲ ಬೀಫ್ ತಿನ್ನುವಂತೆ ಒತ್ತಾಯಿಸಿದ್ದಾನೆ. ನಿಮಗೆ ಜೈನ್ ಬೀಫ್ ಕೊಡುತ್ತೇನೆ ಎಂದು ಮೂದಲಿಸಿದ್ದಾನೆ.
ಎಲ್ಲಾ ವಿದ್ಯಾರ್ಥಿಗಳು ಈತನನ್ನು ನೋಡುತ್ತಾ ಕುಳಿತರೆ ಮನೀಶ್ ಎಂಬ ಯಾವ ಸಂಘಟನೆಗೂ ಸೇರದ ವಿದ್ಯಾರ್ಥಿ ಕೋಪಗೊಂಡು ಈತನಿಗೆ ಥಳಿಸಿದ್ದಾನೆ. ಸೂರಜ್ ಗ್ಯಾಂಗ್ ಕೂಡ ಆತನಿಗೆ ಥಳಿಸಿದೆ. ಗಲಾಟೆಯಲ್ಲಿ ಸೂರಜ್ ಕಣ್ಣಿಗೆ ಏಟು ಬಿದ್ದರೆ, ಮನೀಶ್ ಕೈಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಆದರೆ ರಾಷ್ಟ್ರೀಯ ಮಾಧ್ಯಮಗಳು ಸೂರಜ್ ಬಗ್ಗೆಯೇ ವರದಿ ಮಾಡಿವೆಯೇ ಹೊರತು ಮನೀಶ್ ಬಗ್ಗೆ ಒಂದಿಂಚೂ ಮಾಹಿತಿ ನೀಡಿಲ್ಲ.
ಉಗ್ರರ ಪರ ಹೋರಾಟ ಮಾಡುವ, ಭಾರತೀಯ ಸೇನೆಯನ್ನು ಟೀಕಿಸುವ ಇತಿಹಾಸವಿರುವ ಅಂಬೇಡ್ಕರ್ ಪೆರಿಯಾರ್ ಸ್ಟುಡೆಂಟ್ ಸರ್ಕಲ್ ಆಗಾಗ ಇಂತಹ ದೌರ್ಜನ್ಯಗಳನ್ನು ಮಾಡುವುದಕ್ಕೆ ಹೆಸರುವಾಸಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.