ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ನಾಲ್ಕು ರಾಷ್ಟ್ರಗಳ ವಿದೇಶಿ ಪ್ರವಾಸದ ಮೂರನೇ ಹಂತವಾಗಿ ರಷ್ಯಾಗೆ ಭೇಟಿ ಕೊಟ್ಟಿದ್ದಾರೆ. ಭಾರತದ ಅತೀದೊಡ್ಡ ಕೂಡಂಕುಲಂ ನ್ಯೂಕ್ಲಿಯರ್ ಪವರ್ ಪ್ಲಾಂಟ್ಗೆ ಸಂಬಂಧಿಸಿದಂತೆ ಅವರ ಈ ಭೇಟಿ ಅತೀ ಮಹತ್ವದ್ದಾಗಿದೆ.
ಈ ಪವರ್ ಪ್ಲಾಂಟ್ ಕೊನೆಯ ಎರಡು ಘಟಕಗಳನ್ನು ರಷ್ಯಾದ ಸಹಕಾರದೊಂದಿಗೆ ನಿರ್ಮಿಸಲು ಉದ್ದೇಶಿಸಲಾಗಿದೆ. ಇದು ಭೇಟಿಯ ಕೇಂದ್ರಬಿಂದುವಾಗಿದೆ. ಅಲ್ಲದೇ ಇತರ 12 ಒಪ್ಪಂದಗಳಿಗೂ ಸಹಿ ಬೀಳುವ ಸಾಧ್ಯತೆ ಇದೆ.
ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭೇಟಿ ಉಭಯ ದೇಶಗಳ ವ್ಯಾಪಾರ ಮತ್ತು ಸಮಸ್ಯೆಯಲ್ಲಿರುವ ಸಂಬಂಧವನ್ನು ಸುಧಾರಿಸಲಿದೆ. ಸಾಂಪ್ರಾದಾಯಿಕವಾಗಿ ಭಾರತದ ಮೈತ್ರಿಯಾಗಿದ್ದ ರಷ್ಯಾ ಇತ್ತೀಚಿನ ದಿನಗಳಲ್ಲಿ ಪಾಕಿಸ್ಥಾನ ಮತ್ತು ಚೀನಾಗೆ ನಿಕಟವಾಗುತ್ತಿದೆ.
ರಷ್ಯಾಗೆ ಬಂದಿಳಿಯುತ್ತಿದ್ದಂತೆ ಟ್ವಿಟ್ ಮಾಡಿರುವ ಮೋದಿ, ಐತಿಹಾಸಿಕ ನಗರ ಸೈಂಟ್. ಪೀಟರ್ಬರ್ಗ್ಗೆ ಬಂದಿಳಿದಿದ್ದೇನೆ. ಭಾರತ-ರಷ್ಯಾ ಬಾಂಧವ್ಯವನ್ನು ಉತ್ತೇಜಿಸುವ ಫಲಪ್ರದ ಭೇಟಿಯನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.