ಬರ್ಲಿನ್: ನಾಲ್ಕು ದೇಶಗಳ ಪ್ರವಾಸದ ಮೊದಲ ಹಂತವಾಗಿ ಜರ್ಮನ್ಗೆ ಭೇಟಿಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಒಟ್ಟು8 ಒಪ್ಪಂದಗಳಿಗೆ ಸಹಿ ಹಾಕಿದರು. ಬಳಿಕ ಜರ್ಮನ್ ಚಾನ್ಸೆಲರ್ ಏಂಜೆಲೋ ಮಾರ್ಕೆಲ್ರೊಂದಿಗೆ ಜಂಟಿ ಹೇಳಿಕೆಯನ್ನು ಬಿಡುಗಡೆಗೊಳಿಸಿದರು.
ಭಾರತ ಮತ್ತು ಜರ್ಮನ್ ಪರಸ್ಪರರಿಗಾಗಿದ್ದು, ನಮ್ಮ ಬಾಂಧವ್ಯ ಫಲಪ್ರದವಾಗಿದೆ. ಉಭಯ ದೇಶಗಳ ಆರ್ಥಿಕ ಬಾಂಧವ್ಯದಲ್ಲಿ ಜಿಗಿತ ಕಂಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಭಯೋತ್ಪಾದನೆ ಮತ್ತು ಹವಮಾನ ವೈಪರೀತ್ಯ ಎದುರಿಸುವಲ್ಲಿ ಜರ್ಮನ್ ನೀಡಿದ ಸಹಕಾರಕ್ಕೆ ಧನ್ಯವಾದಗಳು, ಜರ್ಮನ್ನಲ್ಲಿ ನನಗೆ ಸಿಕ್ಕ ಭವ್ಯ ಸ್ವಾಗತಕ್ಕೆ ಚಿರಋಣಿಯಾಗಿದ್ದೇನೆ ಎಂದರು.
ಕೌಶಲ್ಯ ಅಭಿವೃದ್ಧಿಯಲ್ಲಿ ಜರ್ಮನ್ ಸಾಕಷ್ಟು ಮುಂದೆ ಸಾಗಿದೆ, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ, ಭಾರತೀಯ ಯುವ ಜನತೆಯು ಇದರ ಲಾಭ ಪಡೆಯಬಹುದು ಎಂದರು.
ಹವಮಾನ ರಕ್ಷಣೆ ಮತ್ತು ಪರಿಸರದೊಂದಿಗೆ ಸೌಹಾರ್ದವಾಗಿ ಬದುಕುವುದು ಭಾರತದ ಮೌಲ್ಯಗಳಲ್ಲಿ ಒಂದು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.