ನವದೆಹಲಿ: ಯುಜಿಸಿಯಿಂದ ಪರಿಚಯಿಸಲ್ಪಟ್ಟ ರ್ಯಾಗಿಂಗ್ ತಡೆ ಮೊಬೈಲ್ ಅಪ್ಲಿಕೇಶನ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಚಾಲನೆ ನೀಡಿದ್ದಾರೆ.
ರ್ಯಾಗಿಂಗ್ನಂತಹ ಸಮಸ್ಯೆಗಳನ್ನು ಎದುರಿಸಲು ದೂರುಗಳನ್ನು ದಾಖಲು ಮಾಡಲು ಈ ಅಪ್ಲಿಕೇಶನ್ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ.
ಮೊದಲು ರ್ಯಾಗಿಂಗ್ ವಿರುದ್ಧ ದೂರು ನೀಡಬೇಕಾದರೆ ವೆಬ್ಸೈಟ್ಗೆ ಹೋಗಬೇಕಾಗಿತ್ತು. ನಮ್ಮ ದಾಖಲೆಗಳ ಪ್ರಕಾರ ಇಂತಹ ದೂರಗಳು ಬಂದಾಗ ತಕ್ಷಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ರ್ಯಾಗಿಂಗ್ ಈಗ ಕಡಿಮೆಯಾಗುತ್ತಾ ಬಂದಿದೆ. ಆದರೂ ಇದನ್ನು ಬುಡ ಸಮೆತ ನಿರ್ಮೂಲನೆ ಮಾಡುವ ಅವಶ್ಯಕತೆ ಇದೆ ಎಂದು ಜಾವ್ಡೇಕರ್ ಹೇಳಿದ್ದಾರೆ.
ಹೊಸ ವಿದ್ಯಾರ್ಥಿಯನ್ನು ಮಾನಸಿಕವಾಗಿ, ದೈಹಿಕವಾಗಿ ದೌರ್ಜನ್ಯಕ್ಕೊಳಪಡಿಸುವುದು ಗ್ಯಾಗಿಂಗ್, ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಹೀಗಾಗೀ ಈ ಅಪ್ಲಿಕೇಶನ್ ರ್ಯಾಗಿಂಗ್ ಎದುರಿಸಲು ವಿದ್ಯಾರ್ಥಿಗಳ ಕೈಯಲ್ಲಿರುವ ಅಸ್ತ್ರವಾಗಲಿದೆ ಎಂದಿದ್ದಾರೆ.
ಆಂಡ್ರಾಯ್ಡ್ ವ್ಯವಸ್ಥೆಯಲ್ಲಿ ಈ ಆ್ಯಪ್ ಕಾರ್ಯನಿರ್ವಹಿಸಲಿಗ್ದು, ವಿದ್ಯಾರ್ಥಿಗಳು ಇದಕ್ಕೆ ರಿಜಿಸ್ಟಾರ್ ಆಗಿ ದೂರು ದಾಖಲಿಸಬಹುದು. ಈ ಬಗ್ಗೆ ತ್ವರಿತ ಕ್ರಮ ಜರಗಿಸಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.