ನವದೆಹಲಿ: ವಿಶ್ವಸಂಸ್ಥೆಯ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಗಮನಾರ್ಹ ಕೊಡುಗೆಯನ್ನು ನೀಡಿದ ಭಾರತವನ್ನು ವಿಶ್ವಸಂಸ್ಥೆ ಪ್ರಶಂಸಿದೆ.
ವಿಶ್ವಸಂಸ್ಥೆ ಶಾಂತಿಪಾಲಕರ ಅಂತಾರಾಷ್ಟ್ರೀಯ ದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ವಿಶ್ವಸಂಸ್ಥೆಯ ಭಾರತದ ರಿಸಿಡೆಂಟ್ ಕೊಆರ್ಡಿನೇಟರ್ ಯುರಿ ಅಫನಸೀವ್ ಅವರು ಭಾರತದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜರಲ್ ಆಟನಿಯೋ ಗುಟೆರ್ರಿಯಸ್ ಅವರ ಸಂದೇಶವನ್ನು ಓದಿದರು.
ಭಾರತ ಸೇನಾ ಪಡೆಯನ್ನು ಕೊಡೆಗೆಯಾಗಿ ನೀಡಿದ ಅತೀ ಪ್ರಮುಖ ದೇಶ. ಕಳೆದ 6 ದಶಕಗಳಲ್ಲಿ ವಿಶ್ವಸಂಸ್ಥೆಯ 71 ಶಾಂತಿಪಾಲನಾ ಕಾರ್ಯಾಚರಣೆಯ ಪೈಕಿ 50 ಕಾರ್ಯಾಚರಣೆಗಳಿಗೆ ಭಾರತ 200,000 ಪಡೆಗಳನ್ನು ಒದಗಿಸಿದೆ. ಪ್ರಸ್ತುತದ 16 ಕಾರ್ಯಾಚರಣೆಗಳ ಪೈಕಿ 13 ಕಾರ್ಯಾಚರಣೆಗಳಲ್ಲಿ ಭಾರತದ ಕೊಡುಗೆ ಇದೆ.
ಕಳೆದ ವರ್ಷ 117 ಶಾಂತಿಪಾಲಕರು ಪ್ರಾಣ ಕಳೆದುಕೊಂಡಿದ್ದು, ಅದರಲ್ಲಿ ಇಬ್ಬರು ಭಾರತೀಯರು ಸೇರಿದ್ದಾರೆ.
ವಿಶ್ವಶಾಂತಿಗಾಗಿ ಭಾರತ ಗಮನಾರ್ಹ ಕೊಡುಗೆಯನ್ನು ನೀಡಿದೆ ಎಂದು ಹೇಳುವುದು ಒಂದು ಲಘು ಹೇಳಿಕೆಯಾಗುತ್ತದೆ ಎಂದಿರುವ ಅವರು, ಪ್ರಾಣತ್ಯಾಗ ಮಾಡಿದ ಬ್ರಿಜೇಶ್ ಥಾಪಾ ಮತ್ತು ಸಿಪಾಯಿ ರವಿ ಕುಮಾರ್ ಅವರಿಗೆ ನಮನಗಳು ಎಂದು ಗುಟೆರ್ರಿಸ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.