ನವದೆಹಲಿ: ಕಾಶ್ಮೀರ ಸಮಸ್ಯೆಗೆ ನಮ್ಮ ಬಳಿ ಶಾಶ್ವತ ಪರಿಹಾರವಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದು, ಆದರೆ ಪ್ರಾದೇಶಿಕ ಸಮಗ್ರತೆಯೊಂದಿಗೆ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ಕಾಶ್ಮೀರದ ಸಮಸ್ಯೆ ಬಗೆಹರಿಸಲು ಶಾಶ್ವತ ಖಾಯಂ ಪರಿಹಾರವನ್ನು ನಾವು ಹುಡುಕಿದ್ದೇವೆ. ಅದಕ್ಕಾಗಿ ಕಾರ್ಯಗಳು ಆರಂಭಗೊಂಡಿದೆ. ನಾವು ಮುಂದುವರೆಯುತ್ತಿದ್ದೇವೆ’ ಎಂದಿದ್ದಾರೆ.
ಸಾರ್ವಜನಿಕವಾಗಿ ಈ ಬಗ್ಗೆ ಚರ್ಚೆ ನಡೆಸಲು ಸುಸಂದರ್ಭವಲ್ಲ, ಪರಿಹಾರ ರಾಜಕೀಯವಾಗಿದೆ. ಮಾಧ್ಯಮದೊಂದಿಗೆ ಈ ಬಗ್ಗೆ ಚರ್ಚಿಸಲು ನಾನು ಬಯಸುವುದಿಲ್ಲ ಎಂದಿದ್ದಾರೆ.
ಕಾಶ್ಮೀರದ ಬಗ್ಗೆ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕಿದ ಅವರು, ಅಭಿವೃದ್ಧಿ ಮತ್ತು ಶಾಂತಿಯ ಬಗ್ಗೆ ಮಾತುಕತೆ ನಡೆಸಲು ಎಲ್ಲರಿಗೂ ಸ್ವಾಗತವಿದೆ ಎಂದಿದ್ದಾರೆ.
ನಾವು ಎಂದಿಗೂ ಮಾತುಕತೆಗೆ ಇಲ್ಲ ಎಂದಿಲ್ಲ, ಮಾತುಕತೆ ಬಯಸುವವರು ಮುಂದೆ ಬರಬೇಕು. ಅದಕ್ಕಾಗಿ ನಾವು ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಆಮಂತ್ರಣ ನೀಡುವುದಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.