ವಡೋದರ: ದೇಶದ 9ನೇ ಸ್ಚಚ್ಛ ನಗರವೆಂದು ಕರೆಸಿಕೊಂಡ ಗುಜರಾತಿನ ವಡೋದರ ಇದೀಗ ಮತ್ತೊಂದು ಸಾಧನೆ ಮಾಡಿದೆ. ಇಲ್ಲಿನ 5000ಕ್ಕೂ ಅಧಿಕ ಮಂದಿ ಬೀದಿ ಬೀದಿಗಳನ್ನು ಗುಡಿಸುವ ಮೂಲಕ ಮೆಕ್ಸಿಕೋ ಸ್ವಚ್ಛತಾ ಹಬ್ಬದ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಗಿನ್ನಿಸ್ ದಾಖಲೆ ಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.
ಮುನ್ಸಿಪಲ್ ಕಾರ್ಪೊರೇಶನ್ ಆಫ್ ವಡೋದರ ಇದನ್ನು ಆಯೋಜನೆಗೊಳಿಸಿದ್ದು, ಗಿನ್ನಿಸ್ ಅಧಿಕಾರಿಗಳು ಸ್ಥಳದಲ್ಲೇ ಸರ್ಟಿಫಿಕೇಟ್ ನೀಡಿ ಗೌರವಿಸಿದ್ದಾರೆ.
ವಡೋದರದ ಅಕೋಟ-ದಂಡಿಯಾಬಝಾರ್ವರೆಗೆ ಸುಮಾರು 1 ಕಿಲೋಮೀಟರ್ ಪ್ರದೇಶವನ್ನು 50, 50 ಮಂದಿಯ ಗುಂಪುಗಳಾಗಿ ಒಟ್ಟು 5 ಸಾವಿರ ಮಂದಿ ರಸ್ತೆಗಳನ್ನು ಗುಡಿಸಿ ಸ್ವಚ್ಛಗೊಳಿಸಿದ್ದಾರೆ.
ಫೆಬ್ರವರಿಯಲ್ಲಿ ಮೆಕ್ಸಿಕೋದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ 1,767 ಮಂದಿ ಭಾಗವಹಿಸಿ ಗಿನ್ನಿಸ್ ದಾಖಲೆ ಮಾಡಿದ್ದರು. ಇದೀಗ ಅದನ್ನು ವಡೋದರದ ಜನತೆ ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ.
ಮಾತ್ರವಲ್ಲದೇ 5 ಸಾವಿರ ಮಂದಿಯ ಈ ಸ್ವಚ್ಛತಾ ಕಾರ್ಯಕ್ಕೆ 50 ಸಾವಿರ ಮಂದಿ ಸಾಕ್ಷಿಯಾಗಿದ್ದುದು ಕೂಡ ಒಂದು ದಾಖಲೆ ಎಂದು ವಡೋದರದ ಮೇಯರ್ ಭರತ್ ದಂಗರ್ ಹೇಳುತ್ತಾರೆ.
5038 ಪೊರಕೆಗಳನ್ನು ಇಲ್ಲಿ ಹಂಚಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕ ಜಿತೇಂದ್ರ ವ್ಯಾಸ್ ಅವರ ಹೋಲಿಕೆಯಿರುವ ವ್ಯಕ್ತಿಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.