ನವದೆಹಲಿ: ಮಹಿಳೆಯರನ್ನು ಅತ್ಯಾಚಾರದಂತಹ ದೌರ್ಜನ್ಯಗಳಿಂದ ರಕ್ಷಿಸುವ ವಿಭಿನ್ನ ಮತ್ತು ವಿನೂತನ ಚಪ್ಪಲಿಯನ್ನು ವಿನ್ಯಾಸಗೊಳಿಸಿದ್ದಾನೆ 17 ವರ್ಷದ ಶಾಲಾ ವಿದ್ಯಾರ್ಥಿ.
ತನ್ನ ಭೌತಶಾಸ್ತ್ರ ವಿಷಯದಿಂದ ಕೆಲವೊಂದು ಕೌಶಲ್ಯಗಳನ್ನು ಕಲಿತ ಸಿದ್ಧಾರ್ಥ್ ಮಂಡಲ ಅದರ ಸಹಾಯದಿಂದ ಮಹಿಳೆಯರಿಗೆಂದೇ ವಿಶೇಷವಾಗಿ ‘ಎಲೆಕ್ಟ್ರೋ ಶೂ’ ವಿನ್ಯಾಸಪಡಿಸಿದ್ದಾನೆ.
ಈ ಶೂನಿಂದ ಅಪರಾಧಿಗಳಿಗೆ ವಿದ್ಯುತ್ ಶಾಕ್ ನೀಡಲು ಸಾಧ್ಯವಾಗುತ್ತದೆ. ಅತ್ಯಾಚಾರ ಪ್ರಯತ್ನವನ್ನು ತಡೆಯುವಲ್ಲಿ ಇದು ಸಹಕಾರಿಯಾಗಲಿದೆ.
ವಿಭಿನ್ನ ಸರ್ಕ್ಯುಟ್ ಬೋರ್ಡ್ನಿಂದ ಇದನ್ನು ತಯಾರಿಸಲಾಗಿದ್ದು, ಹೆಜ್ಜೆಗಳಿಂದಲೇ ಚಾರ್ಜ್ ಆಗುತ್ತದೆ. ಹೆಚ್ಚು ನಡೆದಂತೆ ಹೆಚ್ಚು ಎನರ್ಜಿ ಸಿಗುತ್ತದೆ. ಈ ಶೂನಲ್ಲಿ 0.1ಎಂಬಿ ವಿದ್ಯುತ್ ಇದ್ದು, ಪೊಲೀಸರಿಗೆ ಮತ್ತು ಕುಟುಂಬ ಸದಸ್ಯರಿಗೆ ಎಚ್ಚರಿಕೆ ರವಾನಿಸಲೂ ಸಹಾಯ ಮಾಡುತ್ತದೆ.
ಮಹಿಳೆಯ ಮೇಲೆ ಅಪರಾಧಿಗಳು ದಾಳಿ ನಡೆಸಲು ಬಂದಾಗ ಈ ಶೂ ಅವರನ್ನು ತಗುಲಿದರೆ ಅವರಿಗೆ ವಿದ್ಯುತ್ ಶಾಕ್ ಆಗುತ್ತದೆ.
2012ರ ದೆಹಲಿ ಗ್ಯಾಂಗ್ ರೇಪ್ ಬಳಿಕ ಸಿದ್ಧಾರ್ಥ್ ಮಹಿಳಾ ರಕ್ಷಣ ಆಡಿವೈಸ್ಗಳನ್ನು ವಿನ್ಯಾಸಪಡಿಸುವತ್ತ ಹೆಚ್ಚು ಗಮನ ಹರಿಸಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.