ನವದೆಹಲಿ: ಮೂರು ವರ್ಷಗಳನ್ನು ಪೂರೈಸಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ ತನ್ನ ಆಡಳಿತದ ವಿಸ್ತೃತ ಪ್ರಗತಿಯ ವರದಿಯನ್ನು ಬಿಡುಗಡೆಗೊಳಿಸಿದೆ.
ಇದರ ಪ್ರಕಾರ 2013ರಲ್ಲಿ ದೇಶದ ಕೇವಲ ಶೇ.29ರಷ್ಟು ಜನ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸಂತುಷ್ಟರಾಗಿದ್ದಾರೆ. 2016ರಲ್ಲಿ ಈ ಸಂಖ್ಯೆ ಶೇ.65ಕ್ಕೆ ಏರಿಕೆಯಾಗಿದೆ. ಸರ್ಕಾರದ ಆರ್ಥಿಕ ನಿಲುವುಗಳ ಬಗ್ಗೆ ಈಗ ಶೇ.80ರಷ್ಟು ಮಂದಿ ಸಂತುಷ್ಟರಾಗಿದ್ದಾರೆ. 2013ರಲ್ಲಿ ಈ ಸಂಖ್ಯೆ ಕೇವಲ ಶೇ.57ರಷ್ಟಿತ್ತು.
ಪ್ರಧಾನಿಯವರ ಜನಪ್ರಿಯತೆಯ ರೇಟಿಂಗ್ ಪ್ರಸ್ತುತ ಶೇ.81ರಷ್ಟಿದೆ ಎಂದು ವದರಿ ಹೇಳಿದೆ.
ಪ್ರಧಾನಿ ನಿನ್ನೆ ನರೇಂದ್ರಮೋದಿ ಆಪ್ನಲ್ಲಿ 2014 ಮತ್ತು ಈಗಿನ ಬಗ್ಗೆ ಹೋಲಿಕೆ ಮಾಡಿ ದಾಖಲೆಗಳನ್ನು ಹಾಕಿದ್ದಾರೆ, ಕೃಷಿ, ಮೊಬೈಲ್ ಬ್ಯಾಂಕಿಂಗ್, ಟೆಲಿ ಡೆನ್ಸಿಟಿ, ಮಹಿಳಾ ಸಬಲೀಕರಣ, ಮೇಕ್ ಇನ್ ಇಂಡಿಯಾ, ಟೂರಿಸಂ, ವಿದ್ಯುದೀಕರಣ, ಸೋಲಾರ್ ಎನರ್ಜಿ, ಎಲ್ಇಡಿ ಬಲ್ಬ್ ಎಲ್ಲಾ ಅಂಶಗಳನ್ನೂ ಇದು ಒಳಗೊಂಡಿದೆ.
ಮೇಕ್ ಇನ್ ಇಂಡಿಯಾದಡಿ ಭಾರತದ ಎಲೆಕ್ಟ್ರಾನಿಕ್ ಉತ್ಪನ್ನ 1,43,000ಕ್ಕೆ ಏರಿಕೆಯಾಗಿದೆ ಎಂದಿದ್ದಾರೆ. 2013ರಲ್ಲಿ ಇದು 11,198 ಇತ್ತು.
ಅಲ್ಲದೇ ಸರ್ಕಾರದ ಪ್ರದರ್ಶನದ ಬಗೆಗಿನ ಸಮೀಕ್ಷೆಯಲ್ಲೂ ಭಾಗವಹಿಸುವಂತೆ ಮೋದಿ ಜನರಿಗೆ ಆಹ್ವಾನ ನೀಡಿದ್ದಾರೆ. ’ಸಾಥ್ ಹೇ, ವಿಶ್ವಾಸ್ ಹೇ, ಹೊ ರಹ ವಿಕಾಸ್ ಹೇ’ ಎಂಬ ಘೊಷಣೆಯನ್ನೂ ಟ್ವಿಟರ್ನಲ್ಲಿ ಹಾಕಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.